April 6, 2010
ನನ್ನ ಕಂದ ಮಲಗಿಕೊಂಡಾಗ
ಅವಳ ಬೊಂಬೆ ನನ್ನ ನೋಡಿ ಹಲ್ಲು ಕಿಸಿಯುತಿದೆ.
ದಿನವಿಡೀ ಅದು ಕಾಡಿ ಬೇಡಿ ಇಸಿದುಕೊಂಡಿದ್ದ ಚಾಕ್ಲೆಟ್ ನ ಕಲೆ ನನ್ನ ಷರ್ಟ್ ಮೇಲಿನ್ನೂ ಹಸಿಯಾಗಿದೆ.
ಕನಸಿನಲ್ಲಿ ಕನವರಿಸಿದಾಗ ಕೊಟ್ಟ ಅಪ್ಪಿಗೆ ಮತ್ತು ಮುತ್ತು ಅವಳ ಮಂದಸ್ಮಿತಕ್ಕೆ ಕಾರಣವಾದಾಗ
ಜೀವನದ ಮೇಲಿನ ಹುಮ್ಮಸ್ಸು ಇಮ್ಮಡಿಯಾಗಿದೆ. - VV
No comments:
Post a Comment