Oct 1, 2012
ಉಸಿರಿನ ಸರಪಳಿಯ ಮಧ್ಯ
ನಿಟ್ಟುಸಿರಿನ ಕೊಂಡಿ - ಜೀವ ಚಿಲುಮೆಯ
ನಿರಂತರತೆಯೋ ಇಲ್ಲ ತುಂಡರಿಕೆಯೋ,
ಯಾರು ಬಲ್ಲರು ?
ನಿದ್ರಿಸುವಾಗ ಯೋಚನೆಗಳ ಪಾಶ
ಎಚ್ಚರದಲ್ಲಿ ನಿಶ್ಶಬ್ದದ ಝೇಂಕಾರ
ಕಣ್ಣ ಕೆಳಗಿನ ಕಪ್ಪು ಸುತ್ತು
ವಯಸ್ಸಿನಿಂದಲ್ಲ ಬಂದಿದ್ದು
ಹೇಳಿದರೂ ಸೈ, ಹೇಳದಿದ್ದರೂ ತಕರಾರಿಲ್ಲ
ಹೇಳಿ ಕೆಡುವದೋ ಹೇಳದೆ ಚಡಪಡಿಸುವದೋ
ಇದ್ದಿದ್ದು ಸತ್ತು ಸತ್ತು ಸತ್ತು ಇರುವದು
ಜೀವನ್ಮೃತ್ಯುವಿಗೆ ನಾ ಒಡ್ಡಿದ ಸವಾಲು -VV
ಉಸಿರಿನ ಸರಪಳಿಯ ಮಧ್ಯ
ನಿಟ್ಟುಸಿರಿನ ಕೊಂಡಿ - ಜೀವ ಚಿಲುಮೆಯ
ನಿರಂತರತೆಯೋ ಇಲ್ಲ ತುಂಡರಿಕೆಯೋ,
ಯಾರು ಬಲ್ಲರು ?
ನಿದ್ರಿಸುವಾಗ ಯೋಚನೆಗಳ ಪಾಶ
ಎಚ್ಚರದಲ್ಲಿ ನಿಶ್ಶಬ್ದದ ಝೇಂಕಾರ
ಕಣ್ಣ ಕೆಳಗಿನ ಕಪ್ಪು ಸುತ್ತು
ವಯಸ್ಸಿನಿಂದಲ್ಲ ಬಂದಿದ್ದು
ಹೇಳಿದರೂ ಸೈ, ಹೇಳದಿದ್ದರೂ ತಕರಾರಿಲ್ಲ
ಹೇಳಿ ಕೆಡುವದೋ ಹೇಳದೆ ಚಡಪಡಿಸುವದೋ
ಇದ್ದಿದ್ದು ಸತ್ತು ಸತ್ತು ಸತ್ತು ಇರುವದು
ಜೀವನ್ಮೃತ್ಯುವಿಗೆ ನಾ ಒಡ್ಡಿದ ಸವಾಲು -VV
No comments:
Post a Comment