Mar 22, 2012
ನಾ ನಿನ್ನನೊಮ್ಮೆ ತೋಟಕ್ಕೆ ಕರೆದೊಯ್ದಿದ್ದೆನಲ್ಲ
ಆ ಹೊತ್ತಿನಲ್ಲಿ ನೀ ನನಗೆ ಕಾಣಿಸಲೇ ಇಲ್ಲ
ತೋಟದಿ ವಿಧ ವಿಧ ಹೂಗಳಿದ್ದವು
ಆ ಹೂಗಳಲ್ಲಿ ನೀನು ಹೂವಾಗಿ ಹೋಗಿದ್ದೆ.
ನಾ ನಿನ್ನನೊಮ್ಮೆ ಜಲವಿಹಾರಕ್ಕೆ ಕರೆದೊಯ್ದಿದ್ದೆನಲ್ಲ
ಅವಗ್ಯೂ ನೀ ನನಗೆ ಕಾಣಲೇ ಇಲ್ಲ
ಕಮಲಗಳಲ್ಲಿ ನೀನೂ ಕಮಲವಾಗಿ ಹೋಗಿದ್ದೆ
ಬೆಳದಿಂಗಳ ರಾತ್ರಿ ನಾವು ಹೊರಟಿದ್ದೆವಲ್ಲ
ಅಲ್ಲಿಯಾದರೂ ನೀನು ಕಾಣಲಿಲ್ಲವಲ್ಲ
ಬೆಳದಿಂಗಳ ಬೆಳಕಲ್ಲಿ ನೀ ಬೆಳಕಾಗಿ ಹೋಗಿದ್ದೆ
ಅಯ್ಯೋ ವಿಧಿಯೇ !
ಜಲಪಾತ ನೋಡಲು ಹೋದಾಗ
ಅಲ್ಲಿಯೂ ನೀ ಕಾಣದಿರಬೇಕೆ?
ಆದದ್ದೇ ಬೇರೆ,
ಕಾಲು ಜಾರಿ ಜಲಪಾತದಿ ಜಲವಾಗಿ ಹೋಗಿದ್ದೆ
(summer of ’91)
No comments:
Post a Comment