Sunday, 28 October 2012

ಸುವಾಸನೆ

Oct 15, 2012


ನೀನಿಲ್ಲದಿದ್ದರೇನಂತೆ ನನ್ನ ಜೊತೆ, ನಿನ್ನೆನಪಿದೆ,
ನನ್ನ ಏಕಾಂತವಿದೆ, ಈ ಮಳೆಯಿದೆ.
ನಿನ್ನ ಬಿಸಿ ಅಪ್ಪುಗೆಯಿಲ್ಲದಿದ್ದರೇನಂತೆ
ಈ ನಡುಕವಿದೆ, ಹಸಿ ಕಂಪನವಿದೆ.
ನಿನ್ನ ನಗುವಿನ ಗದ್ಗದಿತವಿಲ್ಲದಿದ್ದರೇನಂತೆ
ಜಿಟಿಜಿಟಿ ತರಂಗಗಳಿವೆ, ಈ ಹನಿಗಳಿವೆ.
ನಿನ್ನ ಮುಂಗುರುಳಗಳ ಅಲೆಯಿರದಿದ್ದರೇನಂತೆ
ಈ ಕಗ್ಗತ್ತಲಿದೆ, ತಂ ತಂಗಾಳಿಯಿದೆ.
ಇನ್ನಾದರೂ ಬಾ, ನನ್ನ ಯೋಚನೆಗಳಲ್ಲಿನ
ಹೂವಾಗಿ, ಅವುಗಳ ಸುವಾಸನೆಯಾಗಿ,
ಕನಸಾಗಿ ನನಸಾಗಿ ವಾಸ್ತವವಾಗಿ,
ಸಂಗೀತ ಸುಧೆಯಾಗಿ, ಗಾನವಾಗಿ,
ಮಧುರ ಸವಿಯಾಗಿ, ಪ್ರೀತಿಯಾಗಿ. - VV



No comments:

Post a Comment