Sunday, 28 October 2012

ಸಂಬಂಧ

Mar 16, 2012

ಮೋಟು ಜಡೆಯ ಘಾಟು ಹುಡುಗಿ
ನನ್ನ ಹೃದಯ ಕದ್ದ ಬೆಡಗಿ
ನೋಡಿ ಮೈಮರೆತೆ ನಾನು
ಕಪ್ಪಾಗಿ ಘರ್ಜಿಸಿತು ಬಾನು
ನನ್ನ ಪ್ರೀತಿ ಮಳೆಗೂ ಗೊತ್ತು
ಹಾಗೇ ನಿಂತಿದ್ದೆ ಬಹಳ ಹೊತ್ತು
ಕೊಡೆಯಲ್ಲಿ ಮರೆಯಾದಳವಳು
ನನಗೆ ಬರೀ ಪ್ರೇಮದ ಗೀಳು
ನಾ ತೊಯ್ದೆ ಮಳೆಯಲ್ಲಿ ಪೂರ್ತಿ
ಮತ್ತೆ ಕಂಡಿತು ಉದ್ದನೆ ಮೂರ್ತಿ
ಶೀತ ನನಗೆ ಬರಲಿಲ್ಲವಲ್ಲ
ಅದವಳಿಗೆ ಬಂದು ಬಿಟ್ಟಿತಲ್ಲ
ಅರೆ ಇದೇನು ಎಂಥಾ ವಿಚಿತ್ರ
ಅಲ್ಲಿ ತೊಯ್ದಿದ್ದು ನಾನು ಮಾತ್ರ !

(1991, was written on my crush )


No comments:

Post a Comment