Sunday, 28 October 2012

ಬಿಕ್ಕಳಿಕೆ

June 25, 2012

ಮಾತು ಅದುಮಿದಷ್ಟೂ ಹೆಚ್ಚಾಗುವದು
ಮೌನ ಜಾಸ್ತಿಯಾದಷ್ಟೂ ಅಹಿತಕರ
ಶಬ್ದ ಬರಲೊಲ್ಲದೇ ಮೀಟುತಿಹುದು
ನೋವಿನ ತಂತಿಗಳನೀ ಬಿಕ್ಕಳಿಕೆ |

ಕಾಣಲಾರದ ಭಾವ ಕೇಳಲಾರದಪಸ್ವರ
ನಗೆಯ ಹಿಂದಿನ ಹುಣ್ಣು ಕೀವು ಸುರಿದಂತೆ
ಹೇಳಲಾಗದ ವಿಷಯ ಭೋರ್ಗರೆವ ಸಾಗರ
ದಡದ ಕಬ್ಬಿಣಕಪ್ಪಳಿಸಿ ಜಂಗು ಹಿಡಿಸಿದಂತೆ |

ಹೇಳಿಕೊಳ್ಳಲು ಹೋದರೆ ಆಗಿಬರುವವರಿಲ್ಲ
ತಿಳಿಸಿ ಹೇಳದೆ ಹೋಗುವ ತಾತ್ಸಾರ
ನಿಜದ ಬಿಸಿಲನು ಮುಚ್ಚುವ ಸುಳ್ಳಿನ ಹಂದರವಿದು
ಬದುಕೇ ಮಾಡಿದ ಮನಸೀ ಜರ್ಜರ |

ಸಮಯ ಹುಡುಕುವ ಹೊರಟ ಹುಚ್ಚು
ಆಶಯ, ವೇಗದ ಪರಿಮಿತಿಯನೂ ಮೀರಿ
ಬಹಳ ಬಳಲಿದನಂತರ ಸಿಕ್ಕಿದಿದಷ್ಟೇ ಉತ್ತರ
ಪ್ರಶ್ನೆಗೂ ನಿಟುಕದ ಈಚಲು ಮರ | – VV



No comments:

Post a Comment