Thursday, 30 May 2013

ರಸದಾಳಿ ಸೇಡು

ಪ್ರೀತಿಯಲ್ಲಿ 
ಖಚಿತ ಪ್ರತಿಫಲಗಳೆಲ್ಲ
ನೀರಸವಾದಮೇಲೆ
ಉಳಿದಿರುವುದೊಂದೇ ಸಂಭ್ರಮ.
ಪ್ರೇಮಿಗಳ ನಡುವಣ
ಒಪ್ಪಂದದ -
ಸಿಹಿಯಾದ ಪ್ರತೀಕಾರ - VV


Wednesday, 22 May 2013

ಹೀಗೊಂದು ರಾತ್ರಿ :

ಇವತ್ತಿನ ರಾತ್ರಿ ವಿಶಿಷ್ಟವಾಗಿತ್ತು. ಹೊರಗಡೆ ಮಳೆ, ಸಿಡಿಲನ ಆರ್ಭಟ. ಎಲ್ಲೋ ಒಂದೆಡೆ ಒಲವು ಮಗ್ಗುಲನ್ನು ಬದಲಿಸಿತ್ತು. ದೂರದ ಮುಗಿಲಲ್ಲಿ ಎರಡು ಮೋಡಗಳು ಸಂಧಿಸಿದ ಹೊತ್ತು. ಅದು ಅಪ್ಪಿಗೆಯೋ, ದೂರವಾಗಿದ್ದ ಸಂಬಂಧದ ದೂರಿನ ಮೊರೆಯೋ, ಕೇಳಲು ಹಿತಕರವಾಗಿತ್ತು. ಒಂದು ಮೋಡ ಕೂಗಿ ಹೇಳಿದಂತೆ "i am in love" ಜೊತೆಗೆ ಇನ್ನೊಂದು ಮೋಡ ಧ್ವನಿಗೂಡಿಸಿದಂತೆ, ಧ್ವನಿ ಬಾನಿನಲ್ಲಿ ಮೊಳಗಿದಾಕ್ಷಣ ಅವರೀರ್ವರ ಕಣ್ಗಳು ಮಿಂಚಿದಂತೆ, ಮಿಂಚಿನ ಜೊತೆಗೆ ಪ್ರೀತಿಯ ಹೊನಲು ಹರಿದಂತೆ, ಹರಿದು ತಮ್ಮಂತೆಯೇ ಮಿಡಿದು ಬಳಲುತ್ತಿರುವ ಹಲವಾರು ಹೃದಯಗಳಿಗೆ ತಂಪು ಹೊಯ್ದಂತೆ ಇನ್ನೂ ಏನೇನೋ ಭಾಸವಾಗುತ್ತಿತ್ತು.

ಬಾಲ್ಕನಿಯಲ್ಲಿ ಕುಳಿತಿರುವ ಜೋಡಿಗೆ ಇಂದು-ಹಿಂದೆಂದೂ ಬರಬಾರದಾಗಿತ್ತೆ ಎನ್ನುವ ಮರುಗು, ಬಂದಾಯ್ತಲ್ಲ ಎನ್ನುವ ಮುಜುಗರದ ಉಲ್ಲಾಸ. ಬಾಲ್ಕನಿ ಚಿಕ್ಕದಾಗಿರುವದರಿಂದ ಕಾಲು ಬಾಲ್ಕನಿಯಿಂದಾಚೆ ಹೊರ ಹಾಯ್ದಿದ್ದವು. ಅವರಿಬ್ಬರ ಕಾಲುಗಳಿಗೆ ಪಟ ಪಟ ಸಿಡಿಯುವ ಪುಟಾಣಿ ಹನಿಗಳು. ತಮ್ಮ ಹಸಿ ಕಾಲನ್ನು ಇನ್ನೊಬ್ಬರ ಹಸಿ ಕಾಲಿಗೆ ತಾಕಿಸಿ ಅವರಿಗೆ ಚಳಿ ಮುಟ್ಟಿಸಿ ಕಾಲು ಒರೆಸಿಕೊಳ್ಳುವ ತುಂಟಾಟ. ಬೊಗಸೆಯಲ್ಲಿ ಸಾಲಿದಷ್ಟೂ ಹನಿಗಳನ್ನೆತ್ತಿ ಇನ್ನೊಬ್ಬರ ಮುಖಕ್ಕೆರಚುವ ಚೆಲ್ಲಾಟ. ಜಗತ್ತಿನ ಸುಖವೆಲ್ಲ ಈ ರಾತ್ರಿಯ ಮಳೆಯಾಗಿ ಸುರಿದರೆ ಆ ಮಳೆಯನ್ನು ಬೊಗಸೆಯಲ್ಲಿ ತುಂಬಿಕೊಳ್ಳುವ ಹುಡುಗಾಟ.

ಗಾಳಿ ಹರಿದು ಮಳೆಯನ್ನೀಚೆ ಹೊಯ್ದಾಗ ಮುಖಕ್ಕೆ ಸಿಡಿಯುವ ಹನಿಗಳು ಅದ್ಯಾವ ದುಃಖದ ಕಣ್ಣೀರನ್ನು ಒರೆಸಿದವೋ, ಅದ್ಯಾವ ಆನಂದಬಾಷ್ಪಗಳ ಜೊತೆಗೆ ಸಮ್ಮಿಲಿತವಾದವೊ, ಆ ಹನಿಗಳಿಗೇ ಗೊತ್ತು. ಒಮ್ಮೆಲೇ ಉಕ್ಕುವ ದುಃಖ, ದುಗುಡದ ರೋದನೆ, ಸಿಡಿಲಿನ ಅಬ್ಬರದ ಜೊತೆಗೂಡಿ ಗಹಗಹಿಕೆಯ ನಗುವಾದದ್ದು ಬಹುಶಃ ಅವರಿಗೂ ಕೇಳಿಸಿರಲಿಕ್ಕಿಲ್ಲ. ಅವಾಗ್ಗೊಮ್ಮೆ ಇವಾಗ್ಗೊಮ್ಮೆ ಅವಳು ಇವನನ್ನು ಹೊಡೆದು, ಗುದ್ದಿ, ಸರಿಯಾಗಿ ಮೋಡದ ಥರಾನೇ, ಇದಕ್ಕಿಂತ ಬೇಗ ಇನ್ನು... ಸಿಗಬಾರದಿತ್ತೇ ನೀನು... ಇನ್ನಾದರೂ ಕೂಡಿಟ್ಟುಕೊ, ನೀ ನನ್ನನೂ ಎಂದದ್ದೆ ಬಂತು...

ವ್ಹಿಸ್ಕಿಯ ಹರಿವು ಬಿಸಿಯುಸಿರನ್ನು ಇನ್ನಷ್ಟು ಬಿಸಿಮಾಡಿ ಚಳಿಯಿಂದ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿತು. ಈಗಾಗಲೇ ಕದ ತಟ್ಟಿದ ನಿದ್ರಾದೇವಿಯನ್ನು ಬರಮಾಡಲು ಒಳಗಡೆ ಹೋದೆ. - VV



Eulogy

ಕೈ ತುಂಬ ಕೆಲಸ, ತಲೆ ತುಂಬ ವಿಚಾರಸ್ರಾವ
ಏನೂ ಮಾಡಲಾಗದೆ
ಹೀಗೆಯೇ ಕೂತುಬಿಡಬೇಕೆನ್ನಿಸುವದು
ಯೋಚನೆಗಳ ಬುರುಗು, ದೊಡ್ಡದಾದಂತೆ ಉಕ್ಕಿ ಒಡೆಯುವ
ಬಂಜೆ ಗುಳ್ಳೆಗಳು
ಕಲ್ಪನೆಯ ತೇವಗೊಳಿಸಿ, ಕಲೆಯನುಳಿಸಿ ಆರಿಹೊಗುವವು
ಯಾರಾದರೂ ಮಾತನಾಡಿಸಿದಾಗ
ಮೂಡುವ ಬಣ್ಣಗೆಟ್ಟ ಮುಗುಳ್ನಗೆಯ
ಬಿಳಿಯ ಶವಚ್ಛಾದನದ ಜೊತೆಗೆ
ಹೂತುಬಿಡಬೇಕೆನ್ನಿಸುವದು
ದಫನಾದಿ-ಅಂತ್ಯಗಳ ನಂತರ
ಪುನಃ ಗುಲಾಬಿಯ ಸಸಿಯಿಟ್ಟು ನೀರೆರಚಿ
ಮಣ್ಣಿನಲಿ ಸೂಸಿದ ಕಂಪನ್ನು
ಯಾರಿದು ಮೂಸಿನೋಡುತಿರುವದು? -VV


Saturday, 18 May 2013

ಕುದಿತ

ರಕ್ತ ಕುದಿದಿದೆ ಕೊತಕೊತ
ಒಳಗಡೆಯಿಲ್ಲ ಒಮ್ಮತ
ಮನಸ್ಸಿನಲ್ಲಿರುವುದನೆಲ್ಲ ಯಾ-
ರೇಕೆ ಅರಿಯದಿರುವರೆನ್ನುತ - VV



ಅನ್ವೇಷಣೆ

ಆಸರ, ಬೇಸರ, ಕಾತರ ಈ ಎಲ್ಲ
ಮನಸ್ಸಿನ ಮಕ್ಕಳೇ ನಿಜವಾದಲ್ಲಿ
ಅವುಗಳ ತಂದೆ ಎಲ್ಲಿ
ಅಂತ ಹುಡುಕ್ತಾ ಇದೀನಿ. - VV


ಹೊಸ ಭಾಷೆ

ನೆನ್ನೆ ರಾತ್ರಿ ಒಂದು ಹೊಸ ಭಾಷೆ ಕೇಳಿದೆ
ಮೋಡ-ಮೋಡದ ಜೊತೆಗೆ ಆಡುವ ಭಾಷೆ
ಅದೇನೋ ವಿಚಿತ್ರ, ಒಂಚೂರು ವಿಲಕ್ಷಣ
ಒಬ್ಬರಿಗೊಬ್ಬರು ಗುದ್ದಿ ಮಿಂಚಾಗುವ ತಲ್ಲಣ
ಯಾರು ಗುಡುಗಿದರೊ ಯಾರು ಅತ್ತರೋ
ದೇವರು ಬಲ್ಲ, ಆದರೆ ಒಂದಂತೂ ನಿಜ
ಸಾವಿರ ಮೈಲಿ ದೂರದ, ತಿಳಿಯದ ಆ ಭಾಷೆಗೆ,
ಮುಗ್ಧ ಮನಸ್ಸಿನ ಕಂದಮ್ಮಗಳು ಹೆದರಿದರೆ
ಧೂರ್ತ ಮನಸ್ಸಿನ ಹೃದಯಗಳು ಖುಷಿಪಟ್ಟವು. -VV


Mexican shallow fried vegetables Rice in Thai curry

Well, well, before Mexico and Thailand declare war on India for my above post, let me confess that i just wanted to give my dish a dhansoo name. And yeah i know it's been long time my hands were itching to prepare something and also share here.

Today we were bored to prepare chapathi and other dish. So I googled a bit for a rice recipe. I read some and as one would imagine, what could finally come up be something different to give you comfort of naming it the way you like.

So lets see how Mexican shallow fried vegetables rice in Thai curry is prepared.

Ingredients:
2 Big onion
Garlic cloves - 10-12
Ginger
Red chilly pepper
Red chillies
Grated coconut
Vegetables (I took cucumber, cabbage, carrot, peas, corn, capsicum etc)

Method:

I do not like to boil certain vegetables, such as cucumber and capsicum. I think they leave a pungent odor if they are boiled. And in any case since the name of our recipe is shallow fried, i stir shallow fried  cucumber and capsicum by pouring very little oil in a flat tawa and cooking them in high flame. They looked like this.



Next, I boiled carrot, cabbage, peas and corn. 



Chopped onion long like this:

Meanwhile, i had soaked rice for half an hour and boiled it in the open container with lots of water in it.



The key ingredient in this whole rice saga is the following. I took 4 red chillies, garlic cloves, ginger little onion and little grated coconut. Ground them in a thick paste. 


In a large kadhai pour oil, fry onion for some time before you add the above paste.


Add boiled vegetables after say 4-5 minutes.

After frying all for another 3-5 mins, add boiled rice. The rice has to boil around 80% and drain it in a strainer without stirring it so as not to break / mash the rice.  Stir it carefully in the fried vegetables. One tip from my wife in this case. Allow the rice to cool down before you add in the bowl so that you do not crush it. (ಗಿಜಗುಳಿಕಿ!)


As finishing touch, add lemon and some grated cheese.


Finally add shallow fried capsicum and cucumber.

Prepare tomato gravy with tomato puree put in garlic tadka as side for this rice. Serve hot.

My rice tasted too well except for the fact that it was bit more pasty than flaky.

Now please do not ask me why Mexico and Thailand came in this dish. Socha tho kehdiya, main thodina koi Harpal Sanjeev Dalal hoon?


Tuesday, 9 April 2013

Short circuit

Complications are like short circuit in the mind's wiring. Both happen because of low resistance. - VV


Hard Work

April 7, 2013

Carrying ego is a hard work. Committing with ego is easy. Facing self and confessing is hard work but carrying out later on is easy. -VV

हौसला

April 6, 2013

ये ख़ामोशी में भी शोर कौनसा,
ये मदहोशी में भी दर्द कौनसा ?
रोती तो आपकी आँखें भी होंगी लेकिन
ये बेबसी में भी हौसला कौनसा ? - VV


Memoir

April 5, 2013

Memories can fade. Memoirs do not. - VV


Mosaic

April 3, 2013

Life is a mosaic of good and ugly events. Individually they may look contrasting. Together they are homogeneous. - VV




Monday, 8 April 2013

ಮೌನದ ತುಟಿಗಳು

लब-ए- खामोश से इज़हार-ए-तमन्ना चाहे
बात करने को भी तस्वीर का लहजा चाहे

तू चले साथ तो आहट भी ना आये अपनी
दर्मियान हम भी न हो यूँ तुझे तनहा चाहे 

ज़हिरी आँखोंसे क्या देख सका कोई
अपने बातों पे भी हम फाश होना चाहे

जिस्म पोशी को मिले चादर-ए-अफलाख़ हमें
सर छुपाने केलिए वुसअत-ए-सेहरा चाहे

ख्वाब में रोये तो एहसास हो सैराबी का
रेत पर सोये और आँख में दरिया चाहे

भेंट चढ़ जाऊं न मैं अपने ही खैर-औ-शर की
खून-ए -दिल ज़ब्त करे ज़ख्म तमाशा चाहे

ज़िन्दगी आँख से ओझल हो मगर ख़त्म न हो
एक जहां और पस-ए-पर्दा-ए-दुनिया चाहे

आज का दिन चलो कट ही गया जैसे भी कटा
अब खुदा बन्दे से खैरियत-ए-फ़र्दा चाहे

ऐसे तैराक भी देखे हैं 'मुज़फ्फर' हमने
गर्क़ होने केलिए भी जो सहारा चाहे - Muzaffar Azmi


-----------------------------------------------------------------------------------------------------
My attempt to translate this beautiful ghazal.....
-----------------------------------------------------------------------------------------------------

ಮೌನ ತುಟಿಗಳಿಂದ ಕೂಡ ಒಪ್ಪಿಗೆಯ ತವಕ ಬೇಕೆಂದೆ
ಮಾತನಾಡುವದಕೂ ನಿನ್ನ ಚಿತ್ರದ ಧಾಟಿಯೇ ಬೇಕೆಂದೆ

ನೀ ನಡೆದಾಗ ನನ್ನ ಜೊತೆಗೆ ನನ್ನದೂ ಸದ್ದಿಲ್ಲ ಒಂದಿಗೆ
ನಮ್ಮ ನಡುವೆ ನಾನೂ ಇರಬಯಸದ ಏಕಾಂತ ಬೇಕೆಂದೆ

ಮೆರೆವ ಕಣ್ಣಲಿ ಯಾರು ತಾನೇ ನೋಡಬಲ್ಲರು ಯಾರನ್ನು
ನನ್ನ ಸ್ವಂತ ಮಾತಿನಿಂದದಲೇ ನನ್ನನ್ನಾನೆ ವಿವರಿಸ ಬೇಕೆಂದೆ

ಮೈ ಮುಚ್ಚಲು ತುಂಡಳತೆಯ ಬಟ್ಟೆ ಮಾತ್ರ ನನಗೆ ಸಾಕು
ಮಾನ ಮುಚ್ಚಲು ಮಾತ್ರ ಸೆಹರಾದ ವಿಶಾಲತೆ ಬೇಕೆಂದೆ

ಕನಸಿನಲ್ಲಿ ನಾನು ಅತ್ತಾಗ ಕೈಗೂಡಿತು ನೀರಾಕಾರ ಧಾರೆ
ಮರಳಿನಲ್ಲಿ ಮಲಗಿರುವೆ ಮತ್ತು ಕಣ್ಣಲ್ಲಿ ತೊರೆ ಬೇಕೆಂದೆ

ನನ್ನ ಒಳಿತು - ಕೆಡಿತಿಗೆ ನನ್ನನ್ನೇ ನಾ ಬಲಿದಾನ ಕೊಡಬಲ್ಲೆ
ಹೃದಯದ ರಕ್ತ ಇಂಗಿದರೂ ಆದ ಗಾಯವ ತೋರಿಸ ಬೇಕೆಂದೆ

ನನ್ನೀ ಜೀವನ ಕಣ್ಮರೆಯಾಗಲಿ ಆದರೆ ಕೊನೆಯಾಗದಿರಲೆಂದು
ಇಂಥದೇ ಸೊಗಸಾದ ಮತ್ತೊಂದು ಮುಸುಕಿನ ಜಗತ್ತು ಬೇಕೆಂದೆ

ಈವತ್ತಿನ ದಿನವೋ ಕಳೆಯಿತು ಇಗೋ ಕಳೆದೇ ಹೋಯಿತು
ಮುಂದೆ ಆ ದೇವರೂ ಮಾನವನನ್ನು ಭವಿಷ್ಯದ ಕಣಿ ಕೇಳ ಬೇಕೆಂದೆ

ನಾ ಎಂಥೆಂಥ ಈಜುಗಾರರನ್ನ ನೋಡಿರುವೆ 'ಮುಝಫ್ಫರ್'
ಮುಳಗಲೂ ಕೂಡ ಆಸರೆಯನ್ನೇ ಬೇಡುವವರ ಕಂಡೆ - VV







Ghazal sung by Chitra Singh is here:  http://www.youtube.com/watch?v=Nw8FL5d-DV0


Tuesday, 2 April 2013

ದುಡುಕು

ಶ್ರಾವಣಕ್ಕೂ ಕಾಯದ ಮಳೆಯಂತೆ
ನಿನ್ನ ದುಡುಕು, ನಂತರದ ಪರಿತಾಪ,
ತಪಿಸಲೆ, ಶಪಿಸಲೆ, ತಣಿಸಲೆ, ನಾಕಾಣೆ
ಒಣ ಹುಲ್ಲ ಮೇಲೆ ಸಾಂತ್ವನ ಹುಯ್ದಂತೆ
ನಿನ್ನ ನೋಟ. ನಿನ್ನೊಡನೆಯ ಕೂಟ.- VV


ಕೋಪ

ಕಂಡು ಕಂಡವರ ಕಣ್ ತಪ್ಪಿಸಿ
ಬೇಕಾದವರ ಮೇಲೆ ಹರಿಹಾಯ್ದು
ಕಣ್ಣು ಮುಚ್ಚಿ ಪರಿತಪಿಸುವ
ಪ್ರೀತಿಯ ವೈಖರಿ. - VV


ಸೇಡು:

ನೀನೇನೆ ಹೇಳು
ನಾನಂಥವನಲ್ಲ
ಎಂದೆಲ್ಲ ಹೇಳುವಷ್ಟೂ
ಹಂಗು ಬಿಟ್ಟುಕೊಡದ
ಹೆಣ್ಣು
ಕನ್ನಡಿಯ ಮುಂದೆ ನಿಂತು
ನನ್ನನ್ನೇ ನೆನೆಸಿ
ಸ್ವತಃ ಮೂಗು ಮುರಿದಳಂತೆ - VV


Thursday, 28 March 2013

ಹೃದಯ ದೇಗುಲ

ಹೃದಯವನ್ನು ಮಂದಿರಕ್ಕೆ ಹೋಲಿಸುವವರ ಜೊತೆಗೆ ಕೈ ಜೋಡಿಸಿ ನಡೆದಾಗ......

ಹೊರಗಿನದೆಲ್ಲ ಮಿಥ್ಯ, ಒಳಗಿರುವುದೇ ಸತ್ಯ.
ಸಾಮಾಜಿಕ ಕಟ್ಟಳೆ, ದುರಂತ ಪ್ರಜ್ಞೆ - ದಿಕ್ಪಾಲಕರು,
ಆತ್ಮಸಾಕ್ಷಿಯೇ ನಂದಿ, ಅರಿವೇ ಗಂಟೆ,
ಹೂವು, ಧೂಪ, ಅಭಿಷೇಕಗಳು - ಹಂಬಲಿಕೆಗಳು.
ಭಕ್ತಿಯೇಪುಷ್ಟಿ , ಪ್ರಸಾದವೇ ಸೃಷ್ಟಿ
ತಪ್ಪು ಮಂತ್ರೋಚ್ಚಾರಣೆಯೇ ಸ್ವಯಂನಿಂದನೆ
ಅವಿವರಣೀಯ ದ್ವಂದ್ವವೇ ಅಲೌಕಿಕ ಅನುಭೂತಿ. - VV


ಪ್ರಯತ್ನ

26th March 2013

some incomplete, imperfect, immature scribble, somewhere in 1991.

ನಿನ್ನ ಮರೆಯಲು ಯತ್ನಿಸುವೆ ಬಹಳ
ಕಾಡುವುದು ನಿನ್ನೆನಪು ಹಗಲು-ಇರುಳ
ಕನಸಲ್ಲಿ ನಿನ್ಮೊಗ ನೋಡಿ ನಗುವುದು
ನನಸಲ್ಲಿ ಆ ಭಾವ ಎಲ್ಲಿ ಹೋಗುವದು?
ಪರಿಹಾರವಿಲ್ಲವೇ ಈ ಥರದ ರೋಗಕ್ಕೆ
ಈ ನಿನ್ನ ಮೋಹಕ್ಕೆ, ಮುಗುಳ್ನಗೆಯ ಪಾಶಕ್ಕೆ?
ನೀ ನನ್ನ ನೋಡಿದೊಡನೆ
ಭಾವನೆಗಳು ಪುಟಿದೇಳುವವು
ಕಾರಂಜಿಯಂತೆ
ನಿನ್ನ ಹಾವಭಾವಗಳು ನಿಸ್ಸಂಶಯ
ಅಪರಂಜಿಯಂತೆ
ಹೆಣ್ಣೊಂದು ರಹಸ್ಯ
ಭಾವುಕ ಗಂಡಿನ ಜೀವನಕ್ಕೆ
ಹಾರುವದು ಅವನ ಮನ
ಕಾಣದಾ ವನಕ್ಕೆ
ಸುಳ್ಳಲ್ಲ ಇದು ನನ್ನನುಭುವದ ನುಡಿ
ನಂಬಿದರೆ ನಂಬಿ, ಬಿಟ್ಟರೆ ಬಿಡಿ - VV


Holi

26th March 2013

Holi : The views on this festival are as diverse as its colors. Think of a locality full of harmony and peace, people loving to see each other's faces, share sweets and happiness with them, playing colors in fun, clean and hygienic way, keeping in mind there is no vulgar wastage of natural resources, it's perfectly fine to play holi.

The other scene is - people want to take revenge on others by smearing them with what not, in the name of holi, thus depleting water even more, not enjoying what they do and not leaving others to their state by dragging them to play, indulging in exchange of unwelcome words and thoughts... it's perfectly unnecessary to play holi.

Whether we help parched areas by not playing holi? It's the same question as whether we help malnourished children by not wasting food.

To me, festival is when we bring smile on the faces of the smile deprived.


Friday, 22 March 2013

साथिया .......भूल न जाना

20 March 2013


क्या था वो हमारा एक दूसरे में ढूँढना
न हम जानते थे, ना ही चाहते थे जानना

हर मुस्कुराहट पे सवाल, हर सवाल पे रूठना
वो कश्मकश की बातें, वो इरादोंका बांटना

क्या ख़ुशी थी क्या गम था, ना सोचना ना समेटना
दुनिया का सींचा हुआ विरोधाभास पर टटोलना

न हो कर भी दिन के तसव्वुर में तेरा मिलना
सपनोंसे शून्य उदास रातों का वीराना

वो बराबर का इंतज़ार, वो दो पल में जीना
वो खो देने के डर से पलके ना झपकना

वो बच्चों का सा उकसाहट, किया गुनाह सुहावना
अपने आप में हसना और अकेले में खूब रोना

ना आयेंगे वो दिन, उम्मीद, माया, ना भावना
इन्द्रधनुष के रंग थे, कुदरती था उनका बिखरना

मैं खुश हूँ और ए गुज़ारिश कि तुम भी खुश रहना
कल मिले न मिले, रहे न रहे पर यादोंको ना मारना -VV






The need

20 March 2013

Need of today in most of our lives is being unfazed, unperturbed, unagitated to the occasions that disturb us; more than seeking happiness. For, presence of the above is happiness. - VV

Self mourning

Mar 14, 2013

ನಿನ್ನ ಪ್ರೇಮದ ಬಗೆಗಿನ ಕುತೂಹಲ
ನನ್ನ ಮೋಕ್ಷದ ಬಗೆಗಿನ ಆಸಕ್ತಿ
(ಈ ಜೀವದ ಮೇಲಿನ ವಿರಕ್ತಿ)
ನೀ ನನ್ನ ಶವದ ಮೇಲೆ
ರೋದಿಸುವದ ಕಾಣುವಾಸೆ -
ಎಷ್ಟು ವಿಲಕ್ಷಣವೋ
ಅಷ್ಟೇ ಸ್ವಯಂ ಸಂತಾಪ ಕೂಡ. - VV


Wednesday, 13 March 2013

Moon

Feb 25, 2013

The moon was beaming with happiness today.
Looking at me, he smiled.
The smallest countenance on my face would have appeared clear to him.
A blush on her face would have a similar effect on me.
I ran for a shelter, the breeze followed.
Could I ever go off her fragrance, it asked.
Wagging trees bespoke, her whisper would have echoed.
Her long tresses came alive with unending dark roads. - VV


ನನ್ನೊಳಗಿನ ದೇವರು

ಹೃದಯಾಳದ ಅವ್ಯಕ್ತ ಭಾವನೆ
ಹೂತಿಟ್ಟಷ್ಟೂ ಪುಟಿದು
ಮಾತು ಮಾತಿಗೆ ನಸುನಗಿಸಿ
ಕಣ್ಣ ಕೊಳದಲ್ಲಿ ತರಂಗವೆಬ್ಬಿಸುವ
ನನ್ನೊಳಗಿನ ದೇವರು - VV


ಅಜ್ಞಾತ ಕುರುಡು

ತಳ ಕಾಣದ ಬಾವಿಯ
ನೀರನ್ನು ಸವಿಯ ಹೊರಟವನಿಗೆ
ಭೂಮಿಯ ತಿರುಳ ತಂಪಿಗೆ
ಮೈನವಿರುವಿಕೆ ಉಂಟಾಗಿ
ತಂಗಾಳಿಯಿಂದಲೇ ಬಾಯಾರಿಕೆ
ತಣಿಸಿಕೊಳ್ಳಹೋದಂತೆ
ಅದೇಕೋ ಪ್ರೀತಿಯರಸುವಿಕೆ
ಕತ್ತಲಲ್ಲಿನ ನೀರಿಗಾಗಿನ
ಗೊಂದಲದ ಚಡಪಡಿಕೆ - VV


Laugh - Cry

March 11, 2013

Joy is of the boy in me and cry is of the adult in standby. -VV

Friday, 8 March 2013

Last morsel

The difference between staying fit and not,
in either health or relationship,
is saying 'no' to that last desirous morsel,
after we are full. - VV


Love shackle

प्यार करो तो दम मिटता है
हक़ जताओ तो दम घुटता है - VV


Perspective

Mar 7, 2013


If you can't understand something, first deserve to understand. Next, change your perspective. -VV


Ghat

Mar 1, 2013

The most dangerous Ghat that sends one tumbling down the road of life is "Vishwasghat". -VV