Saturday, 18 May 2013

ಹೊಸ ಭಾಷೆ

ನೆನ್ನೆ ರಾತ್ರಿ ಒಂದು ಹೊಸ ಭಾಷೆ ಕೇಳಿದೆ
ಮೋಡ-ಮೋಡದ ಜೊತೆಗೆ ಆಡುವ ಭಾಷೆ
ಅದೇನೋ ವಿಚಿತ್ರ, ಒಂಚೂರು ವಿಲಕ್ಷಣ
ಒಬ್ಬರಿಗೊಬ್ಬರು ಗುದ್ದಿ ಮಿಂಚಾಗುವ ತಲ್ಲಣ
ಯಾರು ಗುಡುಗಿದರೊ ಯಾರು ಅತ್ತರೋ
ದೇವರು ಬಲ್ಲ, ಆದರೆ ಒಂದಂತೂ ನಿಜ
ಸಾವಿರ ಮೈಲಿ ದೂರದ, ತಿಳಿಯದ ಆ ಭಾಷೆಗೆ,
ಮುಗ್ಧ ಮನಸ್ಸಿನ ಕಂದಮ್ಮಗಳು ಹೆದರಿದರೆ
ಧೂರ್ತ ಮನಸ್ಸಿನ ಹೃದಯಗಳು ಖುಷಿಪಟ್ಟವು. -VV


No comments:

Post a Comment