ಕೈ ತುಂಬ ಕೆಲಸ, ತಲೆ ತುಂಬ ವಿಚಾರಸ್ರಾವ
ಏನೂ ಮಾಡಲಾಗದೆ
ಹೀಗೆಯೇ ಕೂತುಬಿಡಬೇಕೆನ್ನಿಸುವದು
ಯೋಚನೆಗಳ ಬುರುಗು, ದೊಡ್ಡದಾದಂತೆ ಉಕ್ಕಿ ಒಡೆಯುವ
ಬಂಜೆ ಗುಳ್ಳೆಗಳು
ಕಲ್ಪನೆಯ ತೇವಗೊಳಿಸಿ, ಕಲೆಯನುಳಿಸಿ ಆರಿಹೊಗುವವು
ಯಾರಾದರೂ ಮಾತನಾಡಿಸಿದಾಗ
ಮೂಡುವ ಬಣ್ಣಗೆಟ್ಟ ಮುಗುಳ್ನಗೆಯ
ಬಿಳಿಯ ಶವಚ್ಛಾದನದ ಜೊತೆಗೆ
ಹೂತುಬಿಡಬೇಕೆನ್ನಿಸುವದು
ದಫನಾದಿ-ಅಂತ್ಯಗಳ ನಂತರ
ಪುನಃ ಗುಲಾಬಿಯ ಸಸಿಯಿಟ್ಟು ನೀರೆರಚಿ
ಮಣ್ಣಿನಲಿ ಸೂಸಿದ ಕಂಪನ್ನು
ಯಾರಿದು ಮೂಸಿನೋಡುತಿರುವದು? -VV
ಏನೂ ಮಾಡಲಾಗದೆ
ಹೀಗೆಯೇ ಕೂತುಬಿಡಬೇಕೆನ್ನಿಸುವದು
ಯೋಚನೆಗಳ ಬುರುಗು, ದೊಡ್ಡದಾದಂತೆ ಉಕ್ಕಿ ಒಡೆಯುವ
ಬಂಜೆ ಗುಳ್ಳೆಗಳು
ಕಲ್ಪನೆಯ ತೇವಗೊಳಿಸಿ, ಕಲೆಯನುಳಿಸಿ ಆರಿಹೊಗುವವು
ಯಾರಾದರೂ ಮಾತನಾಡಿಸಿದಾಗ
ಮೂಡುವ ಬಣ್ಣಗೆಟ್ಟ ಮುಗುಳ್ನಗೆಯ
ಬಿಳಿಯ ಶವಚ್ಛಾದನದ ಜೊತೆಗೆ
ಹೂತುಬಿಡಬೇಕೆನ್ನಿಸುವದು
ದಫನಾದಿ-ಅಂತ್ಯಗಳ ನಂತರ
ಪುನಃ ಗುಲಾಬಿಯ ಸಸಿಯಿಟ್ಟು ನೀರೆರಚಿ
ಮಣ್ಣಿನಲಿ ಸೂಸಿದ ಕಂಪನ್ನು
ಯಾರಿದು ಮೂಸಿನೋಡುತಿರುವದು? -VV
No comments:
Post a Comment