Wednesday, 13 March 2013

ಅಜ್ಞಾತ ಕುರುಡು

ತಳ ಕಾಣದ ಬಾವಿಯ
ನೀರನ್ನು ಸವಿಯ ಹೊರಟವನಿಗೆ
ಭೂಮಿಯ ತಿರುಳ ತಂಪಿಗೆ
ಮೈನವಿರುವಿಕೆ ಉಂಟಾಗಿ
ತಂಗಾಳಿಯಿಂದಲೇ ಬಾಯಾರಿಕೆ
ತಣಿಸಿಕೊಳ್ಳಹೋದಂತೆ
ಅದೇಕೋ ಪ್ರೀತಿಯರಸುವಿಕೆ
ಕತ್ತಲಲ್ಲಿನ ನೀರಿಗಾಗಿನ
ಗೊಂದಲದ ಚಡಪಡಿಕೆ - VV


No comments:

Post a Comment