Thursday, 28 March 2013

ಹೃದಯ ದೇಗುಲ

ಹೃದಯವನ್ನು ಮಂದಿರಕ್ಕೆ ಹೋಲಿಸುವವರ ಜೊತೆಗೆ ಕೈ ಜೋಡಿಸಿ ನಡೆದಾಗ......

ಹೊರಗಿನದೆಲ್ಲ ಮಿಥ್ಯ, ಒಳಗಿರುವುದೇ ಸತ್ಯ.
ಸಾಮಾಜಿಕ ಕಟ್ಟಳೆ, ದುರಂತ ಪ್ರಜ್ಞೆ - ದಿಕ್ಪಾಲಕರು,
ಆತ್ಮಸಾಕ್ಷಿಯೇ ನಂದಿ, ಅರಿವೇ ಗಂಟೆ,
ಹೂವು, ಧೂಪ, ಅಭಿಷೇಕಗಳು - ಹಂಬಲಿಕೆಗಳು.
ಭಕ್ತಿಯೇಪುಷ್ಟಿ , ಪ್ರಸಾದವೇ ಸೃಷ್ಟಿ
ತಪ್ಪು ಮಂತ್ರೋಚ್ಚಾರಣೆಯೇ ಸ್ವಯಂನಿಂದನೆ
ಅವಿವರಣೀಯ ದ್ವಂದ್ವವೇ ಅಲೌಕಿಕ ಅನುಭೂತಿ. - VV


1 comment: