ನನ್ನ ಜೀವನ, ಯಾರೋ ಜೀವಿಸಿದ್ದಾಗಿದೆ,
ನನಗೆ ಗೊತ್ತಿಲ್ಲ.
ನನ್ನ ಹಸಿವು, ನನ್ನ ದಾಹ,
ಯಾರೋ ತಣಿಸಿದ್ದಾಗಿದೆ,
ನನಗೆ ಗೊತ್ತಿಲ್ಲ.
ನನ್ನೀ ಯೋಚನೆಗಳು
ಯಾರೋ ಆಗಲೇ ಯೋಚಿಸಿದ್ದಾಗಿದೆ,
ನನಗೆ ಗೊತ್ತಿಲ್ಲ.
ನನ್ನ ಕಷ್ಟಗಳನ್ನು ಯಾರೋ ಅನುಭವಿಸಿದ್ದಾಗಿದೆ,
ನನಗೆ ಗೊತ್ತಿಲ್ಲ.
ನನ್ನ ಸುಖ ನನಗೆ, ನನ್ನ ಸಾವು ನನಗೆ,
ಯಾರೋ ಹೀಗೇ ಸುಖವುಂಡಾಗಿದೆ,
ನನಗೆ ಗೊತ್ತಿಲ್ಲ.
ಜಗತ್ತಿನ ಅರ್ಥ, ನಾನು ಕಾಣ ಹೊರಟಿರುವೆ,
ಅದರಲ್ಲೇನೂ ಅರ್ಥವಿಲ್ಲವೆಂದು
ಯಾರೋ ಕಂಡಿದ್ದಾಗಿದೆ,
ನನಗೆ ಗೊತ್ತಿಲ್ಲ.
ನನ್ನ ಅಳುವಿನ ಹಿಂದಿನ ನಗೆಯ, ಯಾರೋ ನಕ್ಕಿದ್ದಾಗಿದೆ,
ನನಗೆ ಗೊತ್ತಿಲ್ಲ. - VV
No comments:
Post a Comment