Sunday, 29 September 2013

ಕಾಡಲ್ಲಿಯ ಸಂಗತಿಗಳು

ತಪ್ಪಿತಸ್ಥ ಗಿಡಕ್ಕೆ
ಜೇಡದ ಕೋಳ ?
-------------------------------------
ಕಾಡಲ್ಲೊಂದು ಮರ - ಗಿಡದ ಲಗ್ನ
ವಧೂ-ವರರ ಮಧ್ಯೆ
ಜೇಡು ಗಂಟು ಹಾಕಿದೆ
-------------------------------------
ತುಂಬು ಬಸುರಿ ಮಾವಿನ ಮರದ
ಹಸಿರು ಸೆರಗಿನ ತುಂಬ
ಹಳದಿ ಚುಕ್ಕೆಗಳು
-------------------------------------
ಗಾಳಿ ಮಹಾರಾಯನ ವಿಹಾರ
ಮೋಡಗಳ ಪಲಾಯನ
ಹುಲ್ಲಿನ ಸಾಮೂಹಿಕ ನಮನ
-------------------------------------
ಮೋಡದ ಅಲೆಗಳ ಮಧ್ಯ
ಹದ್ದೊಂದು ಮೀಯುತ್ತಿದೆ
-------------------------------------
ಗಿಳಿ ಕಚ್ಚಿದ ಹಣ್ಣು
ನಾಚಿ ಕೆಂಪಾಗಿದೆ
------------------------------------
-VV


No comments:

Post a Comment