Sunday, 29 September 2013

ಹೂವಿನ ಬಣ್ಣ

ಮಳೆಯೊಂದುಸಲ
ಹೂವಿನ ಮೇಲೆ ಕೋಪಗೊಂಡು
ಅದರ ಬಣ್ಣ ಕಳೆಯಲಿಚ್ಛಿಸಿ
ರಭಸದಿಂದ ಸುರಿಯಿತಂತೆ
ಪಾಪದ ಹೂವು ಕೆಳಗೆ ಬಿದ್ದರೂ
ಬಣ್ಣ ಹಾಗೇ ಇರುವದ ನೋಡಿ
ಈಗ ಮಳೆ ಹಗುರಾಗಿ ಹುಯ್ಯುತ್ತಿದೆ
ಮತ್ತೊಂದು ಹೂವಿಗೆ ಜನ್ಮ ಕೊಡಲು
-VV



ಕಾಡಲ್ಲಿಯ ಸಂಗತಿಗಳು

ತಪ್ಪಿತಸ್ಥ ಗಿಡಕ್ಕೆ
ಜೇಡದ ಕೋಳ ?
-------------------------------------
ಕಾಡಲ್ಲೊಂದು ಮರ - ಗಿಡದ ಲಗ್ನ
ವಧೂ-ವರರ ಮಧ್ಯೆ
ಜೇಡು ಗಂಟು ಹಾಕಿದೆ
-------------------------------------
ತುಂಬು ಬಸುರಿ ಮಾವಿನ ಮರದ
ಹಸಿರು ಸೆರಗಿನ ತುಂಬ
ಹಳದಿ ಚುಕ್ಕೆಗಳು
-------------------------------------
ಗಾಳಿ ಮಹಾರಾಯನ ವಿಹಾರ
ಮೋಡಗಳ ಪಲಾಯನ
ಹುಲ್ಲಿನ ಸಾಮೂಹಿಕ ನಮನ
-------------------------------------
ಮೋಡದ ಅಲೆಗಳ ಮಧ್ಯ
ಹದ್ದೊಂದು ಮೀಯುತ್ತಿದೆ
-------------------------------------
ಗಿಳಿ ಕಚ್ಚಿದ ಹಣ್ಣು
ನಾಚಿ ಕೆಂಪಾಗಿದೆ
------------------------------------
-VV


ಜ್ಞಾನ

ಪ್ರಾಣಿಗಳಿಗೂ ಶಾಲೆಗೆ ಕರೆಸಿ,
ಅವುಗಳಿಂದ ಕಲೆಯುವದು ಬಹಳವಿದೆ!
----------------------------------------------
ತುಂಬಿದ ಕೊಡ
ಒಳಗೊಳಗೇ ಪಾಚಿಗಟ್ಟಿತ್ತು
----------------------------------------------
ನಂಬಿಕೆಯ ಬಗೆಗಿನ ಜ್ಞಾನ ನಿಜವಿರಬಹುದು
ಜ್ಞಾನದ ಮೇಲಿನ ನಂಬಿಕೆ ಸುಳ್ಳು
----------------------------------------------
ಯಾವಾಗಲೂ, ಯಾರನ್ನೂ ದ್ವೇಷಿಸಬೇಡಿ
ಎಂದು ಸಾರುವ ಸ್ವಾಮಿಗೆ
ದ್ವೇಷದ ಮೇಲೆಯೇ ಹಗೆತನವೇ ?
----------------------------------------------
ಆ ಬುದ್ಧ ನಕ್ಕಿದ್ದನ್ನು ನೋಡಿ
ಇತರರು ಮ್ಲಾನವಾದರು
----------------------------------------------
-VV

ಕೆಲವೊಂದು

ದಿನವೂ ಮುಟ್ಟಿನೋಡುತ್ತಿದ್ದ ಸರಳು
ಕಾಯ್ದು ಒಂದು ದಿನ ಬರೆಹಾಕಿತ್ತು
-----------------------------------
ಇಷ್ಟುದಿನದ ಮೌನ
ಇಂದು ಯಾಕೋ ಕೊರಳು ಬಿಗಿಸುತ್ತಿದೆ
-----------------------------------
'ಹೊಳೆ'ಯುತ್ತಿದ್ದುದನ್ನೆಲ್ಲಾ ಭವಿಷ್ಯಕ್ಕೋಸ್ಕರ
box ನಲ್ಲಿ ಜೋಪಾನವಾಗಿಟ್ಟಿದ್ದೆ
ಈಗ out of the box ಯೋಚನೆಗಳೇ ಹೊಳೀತಾ ಇಲ್ಲ
-----------------------------------
ಕೆಂಡವನ್ನು ಮುಚ್ಚಿದ ಬೂದಿ
ದೇವರ ಪ್ರಸಾದ ಎಂದು ದಿನವೂ ಹಣೆಗೆ ಹಚ್ಚುತ್ತಲೇ ಹೋದೆ
------------------------------------
ದೂರದ ಗುಡ್ಡ ಕಣ್ಣಿಗೆ ನುಣ್ಣಗೆ ಎನ್ನುತ್ತಲೇ
shaving ರೇಜರ್ ನಿಂದ ಕೆತ್ತಿಸಿಕೊಂಡೆ
------------------------------------
ನಾನೇನು ಗುಲಾಮನೇ, ಬೇರೆಯವರ ಮಾತು ಕೇಳಲು
ಎಂಬ ನನ್ನ ಯೋಚನೆಯೇ ನನ್ನ ಧಣಿ ಯಾಗಿದ್ದು
ಗೊತ್ತಾಗಲೇ ಇಲ್ಲ
------------------------------------
- VV

apologue

सुनी हिक़ायत-ए-हस्ती तो दरमियाँ से सुनी
ना इब्तिदा कि खबर, न इन्तेहा मालूम - शाद अज़ीमाबादी

half way through i happened to hear life's apologue
I couldn't reckon the origin, nor could I figure out the apogee - Shad Azeemabadi,

ಅರ್ಧದಿಂದಲೇ ಕೇಳಿದೆ ಜೀವನದ ಕಟ್ಟು ಕಥೆಯ
ಅದರ ಮೂಲವೂ ಗೊತ್ತಿಲ್ಲ, ಮುಕ್ತಾಯವೂ ತಿಳಿದಿಲ್ಲ - ಶಾದ್ ಅಝೀಮಾಬಾದಿ

The blind spot

The blind spot between the eyes is a flaw
The mist that Sun forgot to thaw
Everybody is alike in the dark
In meditation does love lurk
Concentration has tenacity slipping
On slimy rock ants are climbing
So much attachment with the renouncement?
Detach as if a smile in a predicament
Clear pond is like a frog's mirror
Ocean is a pearls' bearer
The one who can swim can drown
Well-read isn't the clever alone
God himself is in search of eternal truth
Creator is sitting in sheer ruth. - VV

ಕುರುಡು ಬಿಂದು

ಕಣ್ಣುಗಳ ನಡುವಿನ ಕುರುಡು ಬಿಂದು
---------------------
ಸೂರ್ಯ ಕರಗಿಸಲು ಮರೆತ ಮಂಜು
---------------------
ಕತ್ತಲೆಯಲ್ಲಿ ಎಲ್ಲರೂ ಸಮ
---------------------
ಧ್ಯಾನದಲ್ಲಿದೆ ಪ್ರೇಮ
---------------------
ಏಕಾಗ್ರತೆಯಲ್ಲಿ ಪಟ್ಟು ಜಾರುತಿವೆ
---------------------
ಹಸಿಬಂಡೆ ಏರುತಿರುವ ಇರುವೆ
---------------------
ಅಲೌಕಿಕತೆಗೇ ಹರಸಾಹಸ ?
---------------------
ರೋದಿಸುವಾಗಿನ ಮಂದಹಾಸ
---------------------
ತಿಳಿಗೊಳ ಕಪ್ಪೆಯ ಕನ್ನಡಿ
---------------------
ಸಾಗರ ಮುತ್ತಿನ ಅಂಗಡಿ
---------------------
ಈಜಬಲ್ಲವನೇ ಮುಳುಗಬಲ್ಲ
---------------------
ಓದಿಕೊಂಡವನು ಜಾಣನಲ್ಲ
---------------------
ಪರಮಾರ್ಥ ಹುಡುಕ ಹೊರಟ ಪರಮಾತ್ಮ
---------------------
ತಲೆ ಮೇಲೆ ಕೈ ಇಟ್ಟು ಕೂತ ಬ್ರಹ್ಮ
--------------------- -VV

Tuesday, 17 September 2013

ಪರಿತ್ಯಾಗ

ರೆಪ್ಪೆ ಅಪ್ಪಳಿಸಿದ ಘಳಿಗೆ
ಕಣ್ಣು ಕುಕ್ಕುವಷ್ಟು ಕತ್ತಲು
ಮೈತುಂಬ ಇರುಳಿನ ಚಾದರು
ಎಷ್ಟು ಹೊರಬರುವ ಯತ್ನ ಮಾಡುವೆನೋ
ಅಷ್ಟು ಜಾರಿಕೊಳ್ಳುವ ಲಾಲಸೆ
ತಲೆಸುತ್ತ ಗಿರಗಿರ
ತಿರುಗುತಿರುವ ಯೋಚನೆ
ಒಂದು ಕ್ಷಣ ಇದ್ದರೆ ಇನ್ನೊಂದು ಕ್ಷಣ ಹಾರುವದು
ಬಿಡದೆ ಹಿಡಿಯುವ ದೇಹ
ಸಡಿಲವಾಗುವ ಚಿತ್ತ
ದೃಷ್ಟಿ ಕಂಡಿರುವದೊಂದು
ನೋಡುತಿರುವೆನು ಎತ್ತ
ನಿಲ್ಲಲೇ ನಾನಲ್ಲೇ
ಇಲ್ಲ ಹೊರಬರಲೇ
ಅವುಚಿ ಕುಳಿತಿದ್ದೆ ಹೀಗೆ
ಪರಿತ್ಯಾಗದ ಹಾತೊರೆಯುವಿಕೆಯಲಿ - VV

Silence

Silence isn't necessarily words not coming out of mouth. But out of our mind. - VV

ನನ್ನ ಬಲ

ನೀನಿದ್ದರೇ ನಲಿವು
ನೀನಿರದಿರೆ ನಲುವು
ಹೋಗಲಾರೆ ಬಿಟ್ಟೆಂದೆ,
ನಿನ್ನ ನಂಬಲಾ ?
ನೀನೆ ನನ್ನ ನಿಲವು,
ನೀನು ನನ್ ಬಲಾ ! - VV

Teacher's day

ಮನಸ್ಸು ತುಂಟ ಆದರೆ ಆಜ್ಞಾಕಾರಿ ಶಿಷ್ಯ. ಗುರುವಾಗುವದು, ಬಿಡುವದು, ನಿನಗೆ ಬಿಟ್ಟಿದ್ದು. - VV
ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

Mind is a scoundrel yet obedient student. It's up to you to mentor it or not. - VV
Happy teacher's day.

ಕಪ್ಪು ಬೆಳಕು:

ಕರಿಚುಕ್ಕೆಯೊಂದು ಕಣ್ಣ ಮುಚ್ಚಿದಲ್ಲಿ
ಹಣೆಮೇಲೆ ಕುಣಿಯುತಿತ್ತು ।
ಕುಣಿ ಕುಣಿದು ಪಸರುತಿತ್ತು ॥

ಮಡಚಿರುವ ತೊಡೆಯ ಬಿಗಿ ಜಾಡದಲ್ಲಿ
ಹೆಡೆಮುರಿಗೆ ಹಿಡಿಯುತಿತ್ತು ।
ಜಗದರಿವ ಸಡಿಲಿಸಿತ್ತು ॥

ಕಸುವಾದ ಮಣ್ಣ ಹಸನಾದ ಬಣ್ಣ
ಸಿಗ್ಗಿನ ಬೀಜ ಬಿತ್ತುತಿತ್ತು ।
ಹೊಸಪೈರು ಬೆಳೆಯುತ್ತಿತ್ತು ॥

ಡಮರಿನಾ ನಾದ ಈಶನಾ ವೇದ
ಮೈ ಹೊಕ್ಕಿ ಅದುರುತಿತ್ತು ।
ತಾಂಡವಾ ತೋರುತಿತ್ತು ॥

ನನಗಿಲ್ಲ ಬ್ರಹ್ಮ ನನ್ನರಿವು ಜಂಗಮ
ಗೂಢಾರ್ಥ ತೆರೆಯುತ್ತಿತ್ತು ।
ತನ್ನತ್ತ ಸೆಳೆಯುತಿತ್ತು ॥ - VV

(As abstract as what I experienced recently...)

Sunday, 1 September 2013

ನೆರಳ ನಗೆ

ಎಲ್ಲಿ ಬೇಕಾದಲ್ಲಿ ನನ್ನ ಹಿಂಬಾಲಿಸಿದ ನೆರಳು
ನಾನು ಕತ್ತಲೆಯತ್ತ ಕಾಲಿಟ್ಟಮೇಲೆ
ಅಲ್ಲೇ ನಿಂತು ನಕ್ಕಿತ್ತು.

ಅವಮಾನ ಮರೆತು ಮರಳಿ ಬರುವನೆಂದು
ಕಾಯುತ್ತಿದೆಯೇನೋ ಪಾಪ ! - VV

ಅರಿವು

ಹೇಳಿಸಿಕೊಂಡು ಮಾಡದೇ ಇರುವುದರ ಬಗ್ಗೆ ಅಲ್ಲ ತಕರಾರು.
ಅದನ್ನು ಮಾಡೇ ಮಾಡುತ್ತೀಯಾ.
ತಿಳಿದಾಗಲೂ ಮಾಡದೇ ಇರುವದಿಲ್ಲ ನೀನು, ಅದಲ್ಲ ನನ್ನ ದೂರು.
ಅರಿವಿಗೆ ಬಾರದೆ ಹೋದ ವಿಷಯಗಳನ್ನು
ಅರಿಯುವ ಪ್ರಯಾಸ ಮಾಡದೇ,
ಜಟಿಲತೆಯಲಿ ನುಸುಳದೇ, ನುಣುಚುಕೊಳ್ಳುತ್ತೀಯಲ್ಲ?
ಆ ಸಂದಿಯಲ್ಲಿ ಸ್ವಲ್ಪ ತೂರು. - VV

Wholeness in bits

To me,
When love shatters, each bit is it's wholeness.
When hatred shatters, each bit is in it's bite-size. - VV

ನನಗೆ,
ಪ್ರೀತಿಯ ಅಖಂಡತೆ ಚೂರಾದಾಗ ಅದರ ಪ್ರತಿ ತುಣುಕೂ ಅಖಂಡತೆಯೇ.
ಹಗೆಯ ಅಖಂಡತೆ ಚೂರಾದಾಗ ಅದರ ಪ್ರತಿ ತುಣುಕೂ ತುಣುಕೇ. - VV

ನನಗೆ ಗೊತ್ತಿಲ್ಲ.



ನನ್ನ ಜೀವನ, ಯಾರೋ ಜೀವಿಸಿದ್ದಾಗಿದೆ,
ನನಗೆ ಗೊತ್ತಿಲ್ಲ.
ನನ್ನ ಹಸಿವು, ನನ್ನ ದಾಹ,
ಯಾರೋ ತಣಿಸಿದ್ದಾಗಿದೆ,
ನನಗೆ ಗೊತ್ತಿಲ್ಲ.
ನನ್ನೀ ಯೋಚನೆಗಳು
ಯಾರೋ ಆಗಲೇ ಯೋಚಿಸಿದ್ದಾಗಿದೆ,
ನನಗೆ ಗೊತ್ತಿಲ್ಲ.
ನನ್ನ ಕಷ್ಟಗಳನ್ನು ಯಾರೋ ಅನುಭವಿಸಿದ್ದಾಗಿದೆ,
ನನಗೆ ಗೊತ್ತಿಲ್ಲ.
ನನ್ನ ಸುಖ ನನಗೆ, ನನ್ನ ಸಾವು ನನಗೆ,
ಯಾರೋ ಹೀಗೇ ಸುಖವುಂಡಾಗಿದೆ,
ನನಗೆ ಗೊತ್ತಿಲ್ಲ.
ಜಗತ್ತಿನ ಅರ್ಥ, ನಾನು ಕಾಣ ಹೊರಟಿರುವೆ,
ಅದರಲ್ಲೇನೂ ಅರ್ಥವಿಲ್ಲವೆಂದು
ಯಾರೋ ಕಂಡಿದ್ದಾಗಿದೆ,
ನನಗೆ ಗೊತ್ತಿಲ್ಲ.
ನನ್ನ ಅಳುವಿನ ಹಿಂದಿನ ನಗೆಯ, ಯಾರೋ ನಕ್ಕಿದ್ದಾಗಿದೆ,
ನನಗೆ ಗೊತ್ತಿಲ್ಲ. - VV

Thought as they thought....

"I think, therefore I exist" - René Descartes.

"I exist, therefore I think" - Sadguru.

"The thought exists in unconsciousness" - Ap Dijksterhuis. (Unconscious Thought Theory UTT)

"Thought is the movement from knowledge" - Jiddu Krishnamurti.

"Thoughts are your guests" - OSHO.

"We are what our thoughts have made us" - Swami Vivekananada.

"The mind is but an aggregate of thoughts and the "i" thought" - Ramana Maharshi

"You can not separate yourself from your thought" - UG.

ತಕರಾರು

ವಿಚಿತ್ರ ಕರಾರು ನಿನ್ನದು,
ನಿನ್ನ ಮರೆಯಲೂ ಕೂಡದು,
ನಾನು ಅಳಲೂ ಕೂಡದು !
ಅದಕ್ಕೇ,
ನೀನು ನೆನಪಾದಾಗ ನಾನು ನಗುವುದು
ನಾನು ನಕ್ಕಾಗ ನಿನ್ನ ನೆನಪಾಗುವದು -VV

Thinline

The thin line between 'understanding' and 'compromise' is also a think line. If you don't think and distinguish, you could risk either merging them or contradicting them. -VV

True to self

I may be smart to fool others. But I am a fool to outsmart myself. -VV

Truth

Truth is a beautiful jail that we can not escape from. -VV

ಮರು ಹುಟ್ಟು

ಹಸಿ ಎಲೆಗೂ ಗೊತ್ತು
ಗಿಡದ ಪಾಶದ ಗುಟ್ಟು
ಒಣಗಿಹೋದಮೇಲೆ
ಎಲ್ಲಿದೆ ಅದರ ಮೇಲಿನ
ಗಿಡದ ಪಟ್ಟು ?
ಸಮಾಜದ ರೀತಿ ನೀತಿಗಳ ಇಕ್ಕಟ್ಟು ?
ಅದೋ, ಅದಾಗಲೇ
ಹಾರುತಿರುವುದು, ಕಂಡು
ಹೊಯ್ಗಾಳಿಯಲಿ ಮರು ಹುಟ್ಟು -VV