ಕಾಲ ಕುದುರೆಯ ನಾಗಾಲೋಟ
ಅದಕೂ ಜೋರು ಹೃದಯಬಡಿತ
ಯಾರು ಇಲ್ಲಿ ಹೆಳವರು ಹೇಳಾ
ನಾನಾ, ನನ್ನ ಯೋಚನೆಗಳಾ
ಕುದುರೆ ಮುಂದೆ ಓಡಿತಾ ನೋಡು
ಹಿಂದೆ ಕುಂಟುವ ಮುಳ್ಳುಗಳ ಜೋಡು
ನೀಳ ನಿದ್ರೆಯಲ್ಲಿ ಕನವರಿಸಿದಷ್ಟೂ
ಬರಿದಾಗದ ಕಹಿ ಕಂತೆಗಳ ಮಾಡು
ಹಿಂಗತ್ತಲಿಂದ ಮುಂಗತ್ತಲವರೆಗೆ
ಕಡ್ಡಾಯದ ಓಟದ ಒಳಗೆ ಹೊರಗೆ
ಶ್ರಮಪಟ್ಟು ತಾನು ಜಾರಿಕೊಂಡಷ್ಟೂ
ಹಿಡಿದೆಳೆಯುವ ವಿಷಯಗಳು ಸುಳಿಯೆಡೆಗೆ
ಭಾವ - ಸಾರವಿಲ್ಲದ ವರಸೆಗಳು
ಚಿರವೆನಿಸುವ ಕ್ಷಣ ಭಂಗುರಗಳು
ಬಾಚಿ ಸೆಳೆದು ಸೆರೆ ಹಿಡಿಯುವಷ್ಟೂ
ನುಣುಚಿಕೊಂಡೊಯ್ಯುವ ನೆನೆಕೆಗಳು
ಆರಂಭ ಅಂತ್ಯಗಳಿಲ್ಲದ ಬಾನು
ಎದೆಗಾಣುವ ಹುಚ್ಚು ಇಹಪರವನು
ದಿಗಂತದೆತ್ತರ ಕೂಡ ನೆಗೆದಷ್ಟೂ
ಎಲ್ಲಿಂದ ಜಿಗಿದೆನೋ ಅಲ್ಲಿಯೇ ಬಿದ್ದೆ ನಾನು - VV
ಅದಕೂ ಜೋರು ಹೃದಯಬಡಿತ
ಯಾರು ಇಲ್ಲಿ ಹೆಳವರು ಹೇಳಾ
ನಾನಾ, ನನ್ನ ಯೋಚನೆಗಳಾ
ಕುದುರೆ ಮುಂದೆ ಓಡಿತಾ ನೋಡು
ಹಿಂದೆ ಕುಂಟುವ ಮುಳ್ಳುಗಳ ಜೋಡು
ನೀಳ ನಿದ್ರೆಯಲ್ಲಿ ಕನವರಿಸಿದಷ್ಟೂ
ಬರಿದಾಗದ ಕಹಿ ಕಂತೆಗಳ ಮಾಡು
ಹಿಂಗತ್ತಲಿಂದ ಮುಂಗತ್ತಲವರೆಗೆ
ಕಡ್ಡಾಯದ ಓಟದ ಒಳಗೆ ಹೊರಗೆ
ಶ್ರಮಪಟ್ಟು ತಾನು ಜಾರಿಕೊಂಡಷ್ಟೂ
ಹಿಡಿದೆಳೆಯುವ ವಿಷಯಗಳು ಸುಳಿಯೆಡೆಗೆ
ಭಾವ - ಸಾರವಿಲ್ಲದ ವರಸೆಗಳು
ಚಿರವೆನಿಸುವ ಕ್ಷಣ ಭಂಗುರಗಳು
ಬಾಚಿ ಸೆಳೆದು ಸೆರೆ ಹಿಡಿಯುವಷ್ಟೂ
ನುಣುಚಿಕೊಂಡೊಯ್ಯುವ ನೆನೆಕೆಗಳು
ಆರಂಭ ಅಂತ್ಯಗಳಿಲ್ಲದ ಬಾನು
ಎದೆಗಾಣುವ ಹುಚ್ಚು ಇಹಪರವನು
ದಿಗಂತದೆತ್ತರ ಕೂಡ ನೆಗೆದಷ್ಟೂ
ಎಲ್ಲಿಂದ ಜಿಗಿದೆನೋ ಅಲ್ಲಿಯೇ ಬಿದ್ದೆ ನಾನು - VV
No comments:
Post a Comment