Vinayananthology ವಿನಯನಂಥಾಲೊಜಿ
Collection of feelings ಕಲಿತ ಅನಿಸಿಕೆಗಳ ಕಲೆತ
Thursday, 6 June 2013
ವಿರೋಧಾ-ಪ್ರಾಸ
ಒಳಗೂ ದೇವರು ಹೊರಗೂ ದೇವರು
ಒಳ-ನಂಬಿಕೆ ನೆವರು ಹೊರಗಡೆ ಸವರು
ಒಳಗೂ ಮಳೆ ಹೊರಗೂ ಮಳೆ
ಒಳಗಡೆ ಸೋರಿಕೆ; ಹೊರಗಡೆ ಹೊಳೆ
ಒಳಗೂ ಹಸಿರು ಹೊರಗೂ ಹಸಿರು
ನಾರುವ ಪಾsಚಿ; ಹೊರಗಡೆ ಬಸಿರು
ಒಳಗೂ ಒರಲು ಹೊರಗೂ ಒರಲು
ಒಳಹೂ ಬಾಡಿದೆ ಹೊರಗಡೆ ಅರಲು
ಒಳಗೂ ಕಾಡು ಹೊರಗೂ ಕಾಡು
ಒಳಗಡೆ ತೆವಲು; ಹೊರಗಿಲ್ಲ ಜಾಡು - VV
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment