Sunday, 16 June 2013

ಮರೆವು

ಮರೆವು, ಎಂದರೇನು?
ನೆನಪಿನ ಅನುಪಸ್ಥಿತಿಯೋ
ನಿರಂತರದ ವಿರಳತೆಯೊ?
ಮೊದಲಿನ ಹಾಗಿಲ್ಲ ಎಲ್ಲ, ನಿಜ,
ಉಸಿರಾಟದಲ್ಲಿನ ಏರುಪೇರಿನ
ಹಾಗೆಯೆ
ನೆನಪುಗಳ ಏರಿಳಿತ
ಏನೂ ನೆನಪಿಲ್ಲವೆಂದರೆ
ಉಸಿರಾಟವಿಲ್ಲವೆಂಬಂತೆ
ಹೊರನೋಟದಲ್ಲಿ ವಿಷಾದವಿರಬಹುದು
ಒಳಗೆ ಮಾತ್ರ
ಹಳೆಯ ಇನಿದಾದ ಕ್ಷಣಗಳ
ಮುಗುಳ್ನಗುವಿನ ಸುವಾಸನೆಯಿದೆ
ಮುಂಬರುವ ಕ್ಷೋಭೆಯ ಆತಂಕಕ್ಕಿಂತ
ಈಗಾಗಲೇ ಸುಳಿದುಹೋದ
ತಂಗಾಳಿಯೇ ಹಿತಕರ. - VV

No comments:

Post a Comment