ನಿನ್ನ ನೋಟ ಮೋಡಗಳ ತೆರೆಗಳಂತೆ
ಹಿಂಡು ಹಿಂಡಾಗಿ ಬಂದು
ಧಗಿಸುವ ಒಂಟಿತನದ ಜ್ವಾಲೆ
ಮುಚ್ಚಿ ಹಿಂದೆ ಸರಿದಂತೆ
ಬೇಗೆ ಜಾಸ್ತಿಯಾದಾಗ
ಕಾರ್ಮೋಡಲೋಪಾದಿ
ಪ್ರೀತಿಯ ಮಳೆಯ ಹುಯ್ದಂತೆ
ಮುದ್ದು ಮಳೆ ಅತಿಯಾಗಿ
ವ್ಯಾಜ್ಯಕ್ಕೆ ಬಂದು ನಿಂತಾಗ
ಬಾಲಿಶತನವ ಕೊಚ್ಚಿ ಕೊಂಡ್ಹೋದಂತೆ
ಉಬ್ಬರದ ಅಬ್ಬರ ಕಡಿಮೆಯಾಗಿ
ಚಂಡಮಾರುತದನಂತರದ
ಹಿತವಾದ ನೀರವತೆಯಂತೆ
ಪುನಃ ಜೀವಕಳೆಯಾಗಿ
ಹಸಿ ಮನದಲ್ಲಿ ಚಿಗುರೊಡೆಯುವ
ಆಸೆಯ ಸಸಿಯಂತೆ
ಗಿಡ-ಮರವಾಗಿ ಹೆಮ್ಮರವಾಗಿ
ಅನುರಾಗ ಸೂಸುವ
ಪ್ರೇಮ ತಂಗಾಳಿಯಂತೆ
ನಿನ್ನ ನೋಟ ಚಂದಿರನ ಚಂಚಲ ಕಿರಣಗಳಂತೆ - VV
bahala chennagide .. Keep writing!
ReplyDeleteThanks Ash! :)
Delete