Loose translation in Kannada, of following Ghalib's ghazal.
दिल ही तो है न संगो-किश्त
दिल ही तो है न संगो-किश्त
दर्द से भर न आये क्यों
रोयेंगे हम हज़ार बार
कोई हमें सताए क्यों
दैर नहीं हरम नहीं
दर नहीं आस्तां नहीं
बैठे हैं रहगुज़ार पे हम
ग़ैर हमें उठाये क्यों
कैद-ए-हयात-ओ-बंद-ए-ग़म
अस्ल में दोनों एक हैं
मौत से पहले आदमी
गम से निजात पाए क्यों
हाँ वो नहीं खुदा परस्त
जाओ वो बेवफा सही
जिसको हो दीन-ओ-दिल अज़ीज़
उसकी गली में जाए क्यों
'ग़ालिब'-ए-खस्ता के बगैर
कौन से काम बंद हैं
रोईये ज़ार ज़ार क्या
कीजिये हाय हाय क्यों - Mirza Ghalib
--------------------------
ಹೃದಯವಿದು ಕಲ್ಲು- ಇಟ್ಟಿಗೆಗಳ ಗೂಡಲ್ಲ
ದುಃಖದಿಂದ ಕೂಡಿ ಬರದಿರುವುದೇ ?
ಅಳುವೆನು ನಾ ಸಾವಿರು ಸಲ
ಯಾರೆಲ್ಲ ನನ್ನ ಪೀಡಿಸ ಬಹುದೇ ?
ಗುಡಿ ಅಲ್ಲ, ಮಸೀದೆ ಅಲ್ಲ
ಬಾಗಿಲಲ್ಲ, ಮೆಟ್ಟಿಲ್ಲಲ್ಲ
ಕೂತಿರುವೆ ದಾರಿಹೋಕ ಮಾರ್ಗದಲ್ಲಿ
ಯಾರೋ ಬಂದು ಎಬ್ಬಿಸಬಹುದೇ ?
ಜೀವನದ ಸೆರೆ, ದುಃಖಗಳ ಸರಪಳಿ
ನಿಜವಾಗಿ ಎರಡೂ ಒಂದೇ
ಸಾವಿನ ಮುಂಚೆ ಮಾನವ
ನೋವುಗಳಿಂದ ವಿಮೋಚನೆಗೊಳಬಹುದೇ ?
ಹೌದು ಅವನಲ್ಲ ಧಾರ್ಮಿಕ
ಇರಬಹುದು ಕೂಡ ನಾಸ್ತಿಕ
ಯಾರಿಗೆ ಧರ್ಮ-ಹೃದಯಗಳ ನಂಟಿದೆ
ಅವರು ಅವನೂರಿಗೆ ಹೋಗಬಹುದೇ ?
ನಿರ್ಭಾಗ್ಯ 'ಗಾಲಿಬ್' ನ ರಹಿತವಾಗಿ
ಯಾವ ಕೆಲಸ ನಿಂತಿವೆ
ಇಷ್ಟು ಕಹಿಯಾಗಿ ಏಕಳುವುದದು
ಇಷ್ಟು ಹಾಹಾಕಾರ ಮಾಡಬಹುದೇ ?
No comments:
Post a Comment