Thursday, 24 January 2013

ಭಾವ ತೀರ ಮೌನ

ನೀ ಬಾಯ್ತುಂಬಿ ನಕ್ಕಾಗ
ಹೃದಯ ತುಂಬಿ ತುಳುಕಿದೆ
ಅದೆಂಥ ನೋವು ಕಾಣದೆ
ಅದೆಂಥ ನಲಿವು ಬಯಸದೆ


ಮಾತಿಗೆ ತಲೆದೂಗಿದಾಗ
ಶಬ್ದ ಮೌನವಾಗಿದೆ
ರೆಕ್ಕೆ ಬಿಚ್ಚಿ ಹಾರಿದೆ
ಚಿಲಿಪಿಲಿಯ ಅರಸಿದೆ


ಮರೆವ ಹರಿವು ಬತ್ತಿದಾಗ
ನೆನಪು ಸಾಗರವಾಗಿದೆ
ಚಂದ್ರನೆಡೆಗೆ ಚಿಮ್ಮಿದೆ
ಅಳಲು ಭೋರ್ಗರಿಸಿದೆ  -VV 



No comments:

Post a Comment