Monday, 7 January 2013

ಹೆಣೆದ ತೊಡಕು

ರಾಜತ್ವದ ಪ್ರೇಮ
ಕೆಲವೊಂದು ನಂಟುಗಳು
ಬಲವಂತದ ಹರಟೆ,
ಕಹಿ ಮನಸುಗಳು

ನಸುನಗೆ, ಕೃತಕಾಲಿಂಗನ
ತೋರಿಕೆಯ ಸಿರಿವಂತಿಕೆ
ಒಳಗೊಳಗಿನ ಬಡತನ
ಜೀವನ - ದಿನದೂಡುವಿಕೆ

ಇಲ್ಲಸಲ್ಲದ ಲಾಭ
ಗ್ರಾಹಕರಹಿತ ವ್ಯಾಪಾರ
ಅನಿಸಿರದ ಕೊರಗು
ಕೊಟ್ಟು-ಇಸಿಯುವ ವ್ಯವಹಾರ

ಆಗೊಮ್ಮೆ ಈಗೊಮ್ಮೆ
ಮಿನುಗುವ ದಿನಗಳು
ಅಮಾವಾಸ್ಯೆಯ ಬೆಳ್ಳಿಚುಕ್ಕಿ
ಬಿಳಿಮೊಗದ ಮುಂಗುರುಳು

ಕನಸಿನಲ್ಲಿನ ಸಂತಸ
ಎದಿರುನೋಡುವ ಯೋಗ
ಗಡಿಬಿಡಿಯ ಪ್ರೇಮ - ಪ್ರೀತಿ
ವರುಷಗಳ ವಿಯೋಗ - VV


1 comment:

  1. bahala chennagide... very nicely captured

    ReplyDelete