ಯಾವುಪಮೇಯ ನಿನ್ನ ಚೆಲುವಿಗೆ ಹೊಂದಿದೆ
ಕಣ್ಮುಚ್ಚಲು ನಿನ್ಮೊಗವೊಂದೇ ಕಂಡು ಬಂದಿದೆ
ಲತೆ ಸೂಸುವ ತಂಗಾಳಿಗೂ ನಾನು ಕೇಳಿದೆ
ನಿನ್ನ ನಗುವ ಕಿಲ ಕಿಲ ಸದ್ದಿಗೆ ಬೆಚ್ಚಿ ಬಿದ್ದಿದೆ
ತಂಪನೀಯುವ ಚಂದಿರಗೆ ಸ್ಪರ್ಧೆ ಕಾದಿದೆ
ನಿನ್ನ ಬಿಂಬ ಅಲೆಗಳ ಮಧ್ಯೆ ಓಲಾಡಿದೆ
ವನದ ಹೂಗಳಲ್ಲೊಂದು ಗುಲಾಬಿ ನಕ್ಕಿದೆ
ನಿನ್ನ ಸುವಾಸನೆ ಅದಕ್ಕೂ ಹುಚ್ಚು ಹಿಡಿಸಿದೆ
ಗೆಳೆತನವೋ ಈರ್ಷೆಯೋ ಇಲ್ಲಿ ಕಂಡಿದೆ
ಕೇಶರಾಶಿಗೂ ದುಂಬಿಗೂ ಪೈಪೋಟಿಯಿದೆ
ನಾಚಿಕೆಯು ಮೈತುಂಬಿ ಕೆಂಪು ರಂಗೇರಿದೆ
ರವಿ ಚುಮುಕಿಸುವ ಥಳಕು ಕೊಂಚ ಮಾಸಿದೆ
ಮತ್ತನೀಯುವ ನೋಟ ಮತ್ತೆ ನನ್ನ ಕಾಡಿದೆ
ಎದ್ದೇಳಲು ಒಂಟಿತನ, ಕವಿತೆ ಮತ್ತು ಕನಸಿದೆ -VV
wah! wah! vanada hoogalallondu gulabi nakkide .... very nice Vinay.. Keep going! You have an ocean of feelings and the are equipped with creativity to express them out :)
ReplyDelete