ಧಾರಣೆ
ನೆನಪು - ಮರೆವಿನ ನಡುವೆ
ಉಸಿರಾಟದ ತೆಳು ದಾರ
ಹರಿದು ಹೋಗದಿರಲೆಂದು
ಬಸವಳಿದು ಬದುಕಲೆ ?
ಮಾತು - ಮೌನದ ಮಧ್ಯೆ
ಯೋಚನೆಗಳ ನುಡಿವತ್ತು
ಬಿಡಿಸಿ ಜೋಡಿಸಲೆಂದು
ಹಗಲಿರುಳು ಎಣಿಸಲೆ ?
ಪ್ರೀತಿ - ಸ್ವಾರ್ಥದ ಮಿತಿ
ಅತಿ ದೀರ್ಘ ಕಾಲುವೆಯ
ನೆಗೆದು ಪಾರಾಗಲೆಂದು
ಕಸುವನ್ನು ಕೂಡಿಡಲೆ ?
ತ್ಯಾಗ - ತೃಷೆ ಗಳ ನಂಟು
ನಂಬಿಕೆಗಳ ಗಲಿಬಿಲಿ
ಜನರ ಒಪ್ಪಿಸಲೆಂದು
ಕಾಣದ ಮನಗಾಣಲೆ ?
-VV
No comments:
Post a Comment