ಬಹಳಷ್ಟು ಮನುಷ್ಯರಿಗೆ ಭ್ರಷ್ಟವಾಗಿಸಲು ಸಾಧ್ಯವಾಗದ ವಿಷಯಗಳೊಲ್ಲೊಂದಾದದು ಸಾವು. ಅವರು ಪ್ರಯತ್ನಿಸಿದರೂ ಸಾವನ್ನು ಅಶುಧ್ಧಗೊಳಿಸಲು ಸಾಧ್ಯವಿಲ್ಲ ಯಾಕೆಂದರೆ ತಮಗೆಷ್ಟೇ ಗೊತ್ತಿದೆಯೆಂದುಕೊಂಡರೂ ೯೯.೯೯೯% ಮನುಷ್ಯರು ಸಾವಿನ ಬಗ್ಗೆ ಅರಿಯಲಾರರು.
ಇದೇ ರೀತಿ ಅಶುಧ್ಧವಾಗಿರದ ಉತ್ಕೃಷ್ಟತೆ ಜೀವನದಲ್ಲಿ ಅಳವಡಿಸಿಕೊಳ್ಳುವದೇ ಒಂದು ಉದ್ದೇಶ. ಈ ಉದ್ದೇಶವನ್ನು ಸಾಧಿಸಲು ನಿದ್ರೆ ಒಂದು ಒಳ್ಳೆಯ ಸಂಗತಿ. ನಿದ್ರೆಯಲ್ಲಿ ನೀವು ಸಾವನ್ನು ಅನುಕರಿಸುತ್ತಿರುತ್ತೀರಿ. ಅಂಥ ನಿದ್ರೆಯನ್ನು ಕನಸು ಕಂಡು ಭ್ರಷ್ಟಗೊಳಿಸಲು ಹೋಗದಿರಿ.
'ಸುಮ್ಮನೆ ಇರು'ವದು ಎಂದರೆ ನಿಮ್ಮ ಭೌತಿಕ ಇರುವಿಕೆ ಅತೀತದ ದ್ವಾರ ಇದ್ದ ಹಾಗೆ. ಅತೀತವು ಈ ದ್ವಾರದ ಮೂಲಕ ತನ್ನ ಅಭಿವ್ಯಕ್ತಿಯನ್ನು ಪಡೆಯಲೂಬಹುದು. ಇಲ್ಲದಿದ್ದರೆ, ಒಬ್ಬ ವ್ಯಕ್ತಿಯಾಗಿ ನೀವೇ ನಿಮ್ಮ ಭೌತಿಕತೆ ಮತ್ತು ಅತೀತದ ಮಧ್ಯ ಅಡ್ಡಗೋಡೆಯಾಗಬಹುದು. ಅಂಥ ಸಂದರ್ಭದಲ್ಲಿ ಜೀವಿಸುವದು ಕಷ್ಟ, ನಿದ್ರಿಸುವದು ಕಷ್ಟ - ಎಲ್ಲವೂ ಕಷ್ಟ.
ಈ ವೇಳೆ, ನಿಮ್ಮ ಅರಿವು ಎಷ್ಟರಮಟ್ಟಿಗೆ ಇದೆಯೆಂದರೆ, ನಿಮ್ಮನ್ನು ಅಕಸ್ಮಾತ್ತಾಗಿ ಅಂತರಿಕ್ಷದಲ್ಲಿ ಬಿಟ್ಟರೆ, ಎಲ್ಲಿ ನೀವು ನೋಡಲು, ರುಚಿ ಸವಿಯಲು, ಕೇಳಿಸಿಕೊಳ್ಳಲು, ಸ್ಪರ್ಷಿಸಲು, ಆಘ್ರಾಣಿಸಲು ಅಸಮರ್ಥರಾದದ್ದಾದರೆ, ನೀವು ಅಸ್ತಿತ್ವದಲ್ಲಿದ್ದೀರೋ ಇಲ್ಲವೋ ನಿಮಗೆ ಗೊತ್ತಾಗುವದಿಲ್ಲ. ನಿಮ್ಮ ಇರುವಿಕೆ ಸಂದರ್ಭೋಚಿತ ಅಥವಾ ಪ್ರಸಂಗಕ್ಕೆ ಸಂಬಂಧವುಳ್ಳದ್ದು, ನೈಜ ಅಸ್ತಿತ್ವದ್ದಲ್ಲ. ಅದ್ದರಿಂದ, ನೀವು ನಿಮ್ಮ ಜೀವನದ ಉದ್ದೇಶ ಅಥವಾ ಇಂದ್ರಿಯ ಜನಿತ ಗ್ರಹಿಕೆಗಳ ಅನುಪಸ್ಥಿತಿಯಲ್ಲಿ ನೀವು ಜೀವಿಸಿರುವಿರೋ ಇಲ್ಲವೋ ಅರಿಯಲಾರಿರಿ. ನಿಮಗೆ ನೀವೇ ಕಲ್ಪಿಸಿಕೊಂಡ ಸನ್ನಿವೇಶಗಳಾದ - ನಿಮ್ಮ ನೌಕರಿ, ಸಂಪತ್ತು, ಮನೆ ಅಥವಾ ಸಂಬಂಧಗಳು, ಇವೆಲ್ಲಾ ಇರದೇಹೋದರೆ- ಒಮ್ಮೆಲೇ ನೀವು ಬದುಕಿರುವದಾದರೂ ಯಾಕೆ ಎಂದೆನಿಸಿಬಿಡುತ್ತದೆ. ನೀವು ಸಂದರ್ಭೋಚಿತ ಪ್ರಾಣಿ, ನೈಜ ಅಸ್ತಿತ್ವದ ಪ್ರಾಣಿಯಲ್ಲ. ಇಡೀ ಆಧ್ಯಾತ್ಮಿಕ ಪ್ರಕ್ರಿಯೆ ನಮ್ಮ ಅಸ್ತಿತ್ವದಲ್ಲಿ ಧೃಢವಾಗಿ ಕಾಲಿಡುವದರ ಬಗ್ಗೆ ಹೊರತು ನಮ್ಮ ಪೂರ್ವಾಪರ ಸಂದರ್ಭಗಳಲ್ಲಿ ಮೇಲಿಂದ ಮೇಲೆ ತೇಲುವದರ ಬಗ್ಗೆ ಅಲ್ಲ.
(ಈ ಕೆಳಗಿನ ಲೇಖನದ ಆಯ್ದುಕೊಂಡ ಭಾಗದ ಅನುವಾದ)
http://blog.ishafoundation.org/lifestyle/role-of-sleep-for-a-spiritual-seeker/

No comments:
Post a Comment