Monday, 14 April 2014

ನನ್ನವಳು ಆಗಬೇಕಿದ್ದವಳು

ನಾ ಕೈ ತೂರಿ ಗುಡ್ಡೆ ಮಾಡಿದ
ಮರಳು ಮನೆಯಲ್ಲಿ
ಕಿರುಬೆರಳು ಹಾಕಿ
ಬೆಳಕಿಂಡಿ ಮಾಡಿದವಳು
ಜೊತೆಗೇ ಕಚಗುಳಿ ಇಟ್ಟವಳು

ನಾ ಬಿಟ್ಟ ಕಾಗದದ ದೋಣಿ
ಮುಂದೆ ಸಾಗಿಸಲು
ಬೆರಳ ಹುಟ್ಟು ಹಾಕಿದವಳು
ಅದು ಕೊಚ್ಚಿ ಹೋಗಲು
ಮಳೆಯಲ್ಲಿ ನನ್ನ ಕಣ್ಣೊರೆಸಿದವಳು

ಕುಂಟಾಟ ಆಡುವಾಗ
ಬೇಕೆಂತಲೇ ಕೈಗೆ ಸಿಕ್ಕಿ
ನನ್ನ ಕೈಗೂ ಮನಸ್ಸಿಗೂ
ಮುದಗೊಳಿಸಿದವಳು
ಕೈ ಕೊಸರಿಕೊಳ್ಳುವ
ಹುಸಿ ಕೋಪ ತೋರಿಸಿದವಳು

ಹರೆಯದ ಹುಚ್ಚು ಹಿಡಿಸಿ
ಕಣ್ಣಿಂದಲೇ ಜೀವ ಮಿನುಗಿಸಿದವಳು
ಪ್ರಾಣ ನನ್ನಲ್ಲಿದೆಯೋ ಅವಳಲ್ಲಿದೆಯೊ
ಅರಿವು ಮರೆಸಿದವಳು

ನನ್ನವಳು ಆಗಬೇಕಿದ್ದವಳು
ಕನಸಿನಲ್ಲೇ ಉಲಿದವಳು
ಬದುಕ ಮಾಯೆ, ಸೊಬಗಿನ ಜೊತೆ
ಮನಸಿನಲ್ಲೇ ಉಳಿದವಳು

-VV


Ignorance

ನನಗ್ಗೊತ್ತಿಲ್ಲವಾದದ್ದು ಬಹಳವಿದೆಯಾದರೂ
ಗೊತ್ತಿಲ್ಲದ್ದು ಗೊತ್ತಾಗುವವರೆಗೆ ಕಾಯಬಹುದು
ಗೊತ್ತಿಲ್ಲ-ಇದು ಗೊತ್ತಾಗಬೇಕೀಗಲೇ.

-VV

I know not, a lot.
What I don't know can
wait to be known.
'I don't know'-this
I need to know now!

-VV

untouchable

ಮನುಷ್ಯ.ರಿಗಿಂತ ಬೇರೆಯಾಗಿ ನೋಡಿದವರೇ
ತಮ್ಮ ದೇವರನ್ನು ಅಸ್ಪೃಶ್ಯನನ್ನಾಗಿ ಮಾಡುವದು
-VV

Why separate your God from the human, and make him untouchable?
-VV

Pretention

ನೀನಲ್ಲದೇ ಇರುವುದನ್ನು ಇಲ್ಲವಾಗಿಸುವದು ನೀನಿದ್ದ ಹಾಗಿರುವದಕ್ಕಿಂತ ಸುಲಭ. ಪ್ರಯತ್ನಿಸಿ ನೋಡು. - VV

Not being what you are not is easier than being yourself. So try it. - VV

ಪ್ರೀತಿ

ಅವನ ಪ್ರೀತಿ ಎಂತಹದು ಅಂತೀರಾ?
ಇಷ್ಟು ದಿವಸ ತಾನಿಲ್ಲದೆ ಬದುಕದವಳು ಏನೋ ಒಂದು ತಪ್ಪು ಮಾಡಿದಳು ಎಂದ ಮಾತ್ರಕ್ಕೆ ತನ್ನನ್ನು ತಾನೇ ದೂರ ಮಾಡಿ ತಾನಿರದೇ ಅವಳಿಗಾಗುವ ಚಿತ್ರಹಿಂಸೆಯನ್ನು ನೆನೆಸಿಕೊಂಡು ಸುಖಿಸುವ ವಿಚಿತ್ರ ಮ್ಯಾಸೋಕಿಸಂ.

ಅವಳದೂ ಕಡಿಮೆಯೇನಿಲ್ಲ.
ಅವನಿಗಾಗುವ ಅಂತಹ ಖುಷಿಗಾಗಿಯೇ ತಾನು ಇನ್ನೂ ಸ್ವಲ್ಪ ಕಷ್ಟ ಅನುಭವಿಸಿ ಅವನಿಗೇ ತೋರಿಸುವ ವಿಲಕ್ಷಣ ಏಕ್ಸಿಬಿಶನಿಸಂ!

Whip

It is best to endure the words; because silence can hit you harder

- VV