Sunday, 28 July 2013

ಒಲುಮೆಯ ಚಿಲುಮೆ

ತಪ್ಪು ಭಾವಿಸಿಯಾಳು ಅವಳೆದರು ಶೋಕಿಸಲೂ ಆಗದು
ಏನು ಆಗುವದಿಲ್ಲಿ ಏನು ಮಾಡಿದರೇನೂ ಆಗದು

ನಾ ಕರೆಯುವೆ ಅವಳನ್ನ ಓ ಭಾವ ಚೇತನವೇ
ಅಂಥದವಳಿಗೆ ಬರಲಿ ಅವಳು ಬರಲಿರಲಾಗದೆ ಆಗದು

ಆಟವೆಂದುಕೊಂಡವಳು ಮರೆತು ಬಿಟ್ಟು ಬಿಟ್ಟಾಳು
ಪ್ರಾಯಶಃ ನಾನು ಕಾಡದೆ ಅವಳಿಗಿರಲಿಕ್ಕೂ ಆಗದು

ಆ ನಿನ್ನ ಓಲೆ ಹಿಡಿದು ದಿನವಿಡೀ ಅಲೆದಾಡುವೆ
ಯಾರಾದರೂ ಕೇಳಿದರೆ ತೋರಿಸದೇ ಇರಲಾಗದು

ಕೋಮಲತೆಗೆ ಧಿಕ್ಕಾರ; ಅವಳು ಒಳ್ಳೆಯವಳಾದರೇನಂತೆ
ನನ್ನ ಕೈಗೆ ಸಿಕ್ಕಾಗ ಅವಳಿಗೆ ಕೈ ಹಚ್ಚಲೂ ಆಗದು

ಅಗೋಚರ ಮೊಗ ಯಾರದೆಂದು ಯಾರು ಹೇಳಬಲ್ಲರು
ಪರದೆ ಬಿಟ್ಟಿರುವಳೋ ಅವಳು; ಸರಿಸಲಿಕ್ಕೂ ಆಗದು

ಸಾವಿಗಾಗಿ ನಾ ಕಾಯಲಾರೆ ಅದು ಬರದೇ ಹೋಗದು
ನೀ ಬಾರದಿರೆಂದು ಬಯಸಿಯೂ ಕರೆಯದೇ ಇರಲಾಗದು

ಅದೆಂಥ ಭಾರ ತಲೆಮೇಲಿದೆ ಹೊರಲಿಕ್ಕೂ ಆಗದು
ಕೆಲಸವಂಥದು ಬಂದೊಡಗಿದೆ ಮಾಡಲಿಕ್ಕೂ ಆಗದು

ಪ್ರೀತಿಯ ಮೇಲೆ ಬಲವಿಲ್ಲ ಅದೊಂದು ಬೆಂಕಿ ಗಾಲಿಬ್
ಹಚ್ಚಿಲಿಕ್ಕೂ ಆಗದು ಅದನ್ನು ಆರಸಲಿಕ್ಕೂ ಆಗದು- VV




नुक्ताचीं है ग़म-ए-दिल उस्को सुनाये न बने
क्या बने बात जहाँ बात बनाये न बने

मैं बुलाता हूँ उसको मगर ए जज़्बा-ए-दिल
उसपे बन जाये कुछ ऐसी की बिन आये न बने

खेल समझा है कहीं छोड़ न दे भूल न जाये
काश यूँ भी हो की बिन मेरे सताए न बने

गैर फिरता है लिए यूँ तेरे ख़त को की अगर
कोई पूछे की यह क्या है तो छिपाई न बने

इस नज़ाकत का बुरा हो वो भले हैं तो क्या
हाथ आये तो उन्हें हाथ लगाये न बने

कह सके कौन की ये जलवागरी किसकी है
पर्दा छोड़ा है वो उसने की उठाये न बने

मौत की राह न देखूं की बिन आये न रहे
तुमको चाहूं की न आवो तो बुलाये न बने

बोज वो सर पे गिरा है की उठाये न उठे
काम वो आन पड़ा है की बनाये न बने

इश्क़ पर जोर नहीं है ये आतिश ग़ालिब
की लगाये न लगे और बुझाये न बने - Mirza Ghalib


Recital of this ghazal by Gulzaar sahab: http://www.youtube.com/watch?v=ru3fXwS1OcY



Monday, 8 July 2013

ಸಂಯೋಗದ ಯೋಗ

ये ना थी हमारी क़िस्मत के विसाल-ए-यार होता
अगर और जीते रहते, यही इंतजार होता 

तेरे वादे पर जिये हम, तो ये जान झूठ जाना 
के खुशी से मर ना जाते, अगर 'ऐतबार' होता 

कोई मेरे दिल से पूछे तेरे तीर-ए-नीम कश को 
ये खलिश कहाँ से होती, जो जिगर के पार होता 

ये कहाँ की दोस्ती है के बने हैं दोस्त नासेह 
कोई चारासाज़ होता, कोई गम-गुसार होता 

रग-ए-संग से टपकता, वो लहू की फिर ना थमता 
जिसे गम समझ रहे हो, ये अगर शरार होता 

कहूँ किस से मैं के क्या हैं शब-ए-ग़म बुरी बला हैं 
मुझे क्या बुरा था मरना अगर एक बार होता 

हुए मर के हम जो रुसवा, हुए क्यों ना गर्क-ए-दरिया 
ना कभी जनाज़ा उठता, ना कहीं मज़ार होता 

ये मसाइल-ए-तसव्वुफ़, ये तेरा बयान 'ग़ालिब' 
तुझे हम वली समझते, जो ना बादा-ख्वार होता   - मिर्ज़ा ग़ालिब


~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ನನಗೆಲ್ಲಿತ್ತು ಸಖಿಯ ಸಂಯೋಗದ ಯೋಗ
ಇನ್ನೂ ಜೀವಿಸಿರೆ ಇಲ್ಲಿಯೇ ಕಾದಿರುತ್ತಿದ್ದೆನೋ

ನಿನ್ನ ಭಾಷೆ ಮೇಲೆ ಉಸಿರಾಡಿದಲ್ಲಿ ಜೀವಿಸಿರೋದು ಸುಳ್ಳು ನಾ
ನಿನ್ನಲಿ ನಂಬಿಕೆ ಇರೆ ಖುಷಿಯಲೇ ಉಸಿರು ಬಿಡುತ್ತಿದ್ದೆನೇನೋ

ಯಾರು ಎದೆಯಾಳ ಅರಿವರೋ ನೀ ಬಿಡದೆ ಇರಿದ ಬಾಣ
ಹೃದಯದಾಚೆ ತೂರಿದರೂ ಇದಕ್ಕೂ ಕಡಿಮೆ ನೋವೇನೋ

ಇದೆಲ್ಲಿಯ ಸ್ನೇಹ, ಸ್ನೇಹಿತರೆಲ್ಲ ಸಲಹೆಗಾರರು
ಮದ್ದು ಮಾಡುವರಿಲ್ಲೀ ಪಾಡಿಗೆ ಮರುಗುವರಿಲ್ಲವೇನೋ

ಕಲ್ಲಿನ ಧಮನಿ ಸುರಿಯುತ್ತಿರೆ ಕೆನ್ನೀರು ಮಿತಿಮೀರುತ್ತಿತ್ತು
ನೀ ತಿಳಿದ ನೋವಲ್ಲ ಇದು ಮಿನುಗೇ ಆಗಬಹುದಿತ್ತೇನೋ

ಯಾರಿಗೆ ಹೇಳಲಿ ನಾನು ನೀ ಇರದ ರಾತ್ರಿಯ ಹಿಂಸೆಯ
ಒಂದೇ ಸಲವಾಗಿದ್ದಲ್ಲಿ ಸಾಯಲೂಬಹುದಿತ್ತು ನಾನೇನೋ

ಸತ್ತು ಅವಮಾನಿತನಾದೆ ನಾ ಮುಳುಗಿ ಹೋಗಲಿಲ್ಲವಾದೆ ನನ್ನ-
ಸಂಸ್ಕಾರವಾಗುತ್ತಿರಲಿಲ್ಲ ಜನ, ಗೋರಿ ಕಟ್ಟುತ್ತಿರಲಿಲ್ಲವೇನೋ

ಈ ಅನುಭಾವದ ಮಾತು ನಿನ್ನೀ ತರಹದ ಹೇಳಿಕೆ ಗಾಲಿಬ್
ನೀ ಕುಡುಕನಾಗದಿರೆ ನಮ್ಮ ಪಾಲಕನೆಂದೇ ಎನುತಿದ್ದೆವೇನೋ

Ghazal sung by Chitra Singh : http://www.youtube.com/watch?v=aELGygxDZ-4



ಚಿಟ ಪಟ

ಜಡಿ ಮಳೆ ಶುರುವಾದಾಗವಳು
ಥಟ್ಟನೇ ಮಾತು ನಿಲ್ಲಿಸಿದಳು;
ಹನಿಗಳ ಪಟಪಟ ಕೇಳುತ್ತಿರುವಂತೆ.
ನನಗೋ, ಎರಡೂ ಒಂದೇ. -VV


Enigmagnetic

S/he who is enigmatic is magnetic. -VV


Con-fusion

You will be fine with anything that you are able to de-fine. - VV


ಬಳೆಚೂರು

ಬಣ್ಣದ ಭಾವನೆಗಳ ಬಳೆ ಚೂರಾದಾಗ ಪರಿಣಾಮ ಆಗದೆ ಇರುವಂತೆ ತೋರಿಸುವುದೊಂದು ಕಲೆ. ಪರಿಣಾಮ ಆಗಿಸದೇ ಇರುವುದು ಇನ್ನೂ ದೊಡ್ಡ ಕಲೆ. ಚೂರುಗಳನ್ನು ಜೋಡಿಸಲು ಹೋದಾತ ಕಲೆಗಾರ. ಜೋಡಿಸದೇ ಹೋದಾತ ಬಳೆಗಾರ. ಕಲೆಗಾರನಿಗೆ ಇನ್ನೊಂದು ಕಲೆ, ಬಳೆಗಾರನಿಗೆ ಇನ್ನೊಂದು ಬಳೆ. - VV


Seen - Unseen

Care is what's seen being taken for things seen. Love is what's not seen being given for things not seen. -VV