ಕನ್ನಡಿ:
ಒಂದು ಕ್ಷಣ ಕನ್ನಡಿ ನನ್ನ ಕಣ್ಣಲ್ಲಿ ಕಣ್ಣಿಕ್ಕಿ ನೋಡಿತು. ಕಣ್ಣಿಗೆ ಕಣ್ಣು ಸೇರಿದ ತಕ್ಷಣ ಕನ್ನಡಿಯ ಕಣ್ಣು ಬೇರೆ ಕಡೆ ತಿರುಚಿಕೊಂಡವು. ನನಗೋ ಆಶ್ಚರ್ಯ, ಸಂಕೋಚ ಎರಡೂ ಆದವು. ನನ್ನನ್ನೇಕೆ ಕನ್ನಡಿ ನೋಡುತ್ತಿಲ್ಲ ಎಂದು ಆಶ್ಚರ್ಯವಾದರೆ ನೋಡದೆ ಇರುವವನನ್ನು ದೃಷ್ಟಿಸಿ ನೋಡುತ್ತಾ ಇರುವೆನಲ್ಲ ಎಂಬ ಸಂಕೋಚ. ಹಾಗೇ ಗಮನಿಸಿ ನೋಡಿದಾಗ ಅದರ ಕಣ್ಣುಗಳಲ್ಲೇನೋ ಹೇಳಲಾಗದ ನೋವು, ಮಾಡದ ತಪ್ಪಿನ ಅನುಭೂತಿ ಕಂಡು ಬಂದವು. ಮಾತನಾಡಿಸಲಿಕ್ಕೆ ಹೋದಾಗ ಕನ್ನಡಿಯೇನೋ ನಿಶ್ಚಯಿಸಿ ಬಾಯಿ ತೆಗೆಯಿತು. ಶಬ್ದ ಬರಲಿಲ್ಲ. ಇಷ್ಟು ದಿವಸ ಹೇಳಿದ್ದನ್ನೇ ಪುನಃ ಹೇಳಲಿಕ್ಕಾಗದ ತಾತ್ಸಾರ, ಜುಗುಪ್ಸೆ ಹಾಗೂ ಬೇಸರ ಕಂಡುಬಂದವು. ಅಷ್ಟು ಹೊತ್ತಿಗೆ ಬಾಗಿಲಿನ ಸದ್ದು ಕೇಳಿ ಬಾಥ್ ರೂಮಿನಿಂದ ನಾನು ಹೊರಗೆ ಬಂದೆ. -VV
The Mirror:
At once, mirror saw me for a moment. No sooner the eyes met, than the mirror resorted to evasive looks and avoided direct eye contact with me. I had bewilderment mixed with sheepishness. Bewilderment because I wondered why the mirror was not looking at me. Sheepishness because I was looking at someone who is turning eyes away from me. With more intent, when I examined deeper, I observed a kind of inexplicable pain and burden of mistake that was not committed. When I opted to ask mirror about it, it thought of something and opened its mouth. There was no voice. There were boredom, disregard and disgust of talking about the same thing time and again with me. I came out of bathroom hearing some sound near the door.
-VV

No comments:
Post a Comment