ಎಲ್ಲರದೂ ಒಂದೊಂದು ತರಹದ ವ್ಯಾಪಾರ
ಪ್ರಾಮಾಣಿಕತೆಯ, ಕಪಟದ,
ನೀತಿವಂತಿಕೆಯ, ಲಂಪಟತನದ,
ಕುತೂಹಲದ, ಅಸಡ್ಡೆಯ,
ಪ್ರೀತಿಯ, ಹಗೆತನದ
ಎಷ್ಟು ಸಾಧ್ಯವೋ ಅಷ್ಟು ಲಾಭ ಮಾಡಿಕೊಳ್ಳುವ ಹಂಬಲ
ಯಾರೂ ನಷ್ಟ ಸಹಿಸಲೊಲ್ಲರು
ಇದು ಹೀಗೇ, ತೆಗೆದುಕೊಳ್ಳಿ ಎಂದು
ಕೆಲವರು ತಮ್ಮ ಸಾಮಾನು ಮಾರಿದರೆ
ಇದು ಹೀಗಲ್ಲ ಎಂದು ಮಾರುವವರೂ ಉಂಟು
ಹೌದು ನಾನು ವ್ಯಾಪಾರಿ ಎಂದು ಒಪ್ಪಿಕೊಳ್ಳುವ ಕೆಲವರಾದರೆ
ಹಾಗಂತ ಒಪ್ಪಿಕೊಳ್ಳ ದಿರುವ ವ್ಯಾಪಾರಿಗಳೂ ಉಂಟು
ಬೇಕು ಎಂದು ಕೇಳುವ, ಕೇಳದೆ ಇತರಿರಗೆ ಕೊಡುವ
ಎಲ್ಲಾ ಒಂದು ರೀತಿ ವ್ಯಾಪಾರವೇ.
ಎಲ್ಲಿವರೆಗೆ ಮಾರುಕಟ್ಟೆ ಇರುವದೋ
ಅಲ್ಲಿವರೆಗೆ ಈ ವ್ಯಾಪಾರ.
ಯಾವತ್ತು ಇದು ಇರದಾಗುವದೋ
ಮತ್ತೊಂದು ವ್ಯವಹಾರ ಶುರುವಾಗುವದೋ ?
-VV
ಪ್ರಾಮಾಣಿಕತೆಯ, ಕಪಟದ,
ನೀತಿವಂತಿಕೆಯ, ಲಂಪಟತನದ,
ಕುತೂಹಲದ, ಅಸಡ್ಡೆಯ,
ಪ್ರೀತಿಯ, ಹಗೆತನದ
ಎಷ್ಟು ಸಾಧ್ಯವೋ ಅಷ್ಟು ಲಾಭ ಮಾಡಿಕೊಳ್ಳುವ ಹಂಬಲ
ಯಾರೂ ನಷ್ಟ ಸಹಿಸಲೊಲ್ಲರು
ಇದು ಹೀಗೇ, ತೆಗೆದುಕೊಳ್ಳಿ ಎಂದು
ಕೆಲವರು ತಮ್ಮ ಸಾಮಾನು ಮಾರಿದರೆ
ಇದು ಹೀಗಲ್ಲ ಎಂದು ಮಾರುವವರೂ ಉಂಟು
ಹೌದು ನಾನು ವ್ಯಾಪಾರಿ ಎಂದು ಒಪ್ಪಿಕೊಳ್ಳುವ ಕೆಲವರಾದರೆ
ಹಾಗಂತ ಒಪ್ಪಿಕೊಳ್ಳ ದಿರುವ ವ್ಯಾಪಾರಿಗಳೂ ಉಂಟು
ಬೇಕು ಎಂದು ಕೇಳುವ, ಕೇಳದೆ ಇತರಿರಗೆ ಕೊಡುವ
ಎಲ್ಲಾ ಒಂದು ರೀತಿ ವ್ಯಾಪಾರವೇ.
ಎಲ್ಲಿವರೆಗೆ ಮಾರುಕಟ್ಟೆ ಇರುವದೋ
ಅಲ್ಲಿವರೆಗೆ ಈ ವ್ಯಾಪಾರ.
ಯಾವತ್ತು ಇದು ಇರದಾಗುವದೋ
ಮತ್ತೊಂದು ವ್ಯವಹಾರ ಶುರುವಾಗುವದೋ ?
-VV