Saturday, 10 August 2013

ಅಪರಿಚಿತೆ

फिर उसी राह गुज़ार पर शायद
हम कभी मिल सकें मगर शायद

जान से भी क्या होगा
फिर भी ए दोस्त गौर कर शायद

जिनके हम मुम्ताज़िर रहे उनको
मिल गए और हम सफ़र शायद

अजनबीयत के धुंध छट जाए
चमक उठे तेरी नज़र शायद

ज़िन्दगी भर लहू रुलाएगी
याद-ए यारां-ए-बेखबर शायद

जो भी बिछडें वो कब मिले फ़राज़
फिर भी तू इंतज़ार कर शायद - अहमद फ़राज़

ಮತ್ತದೇ ಹಾದಿಯಲ್ಲಿ ಪ್ರಾಯಶಃ
ಸಿಗಬಹುದು ನಾವಿಬ್ಬರೂ; ಆದರೆ, ಬಹುಶಃ ...

ಗುರುತು ಪರಿಚವಿದ್ದರೂ ಏನಂತೆ
ಚೂರು ಗೆಳತಿ ಗಮನಿಸಿನೋಡು, ಬಹುಶಃ ...

ಯಾರಿಗೋಸ್ಕರ ಕಾಯ್ದಿರುವೆನೋ ನಾನು
ಅವಳಿಗೆ ಬೇರೊಬ್ಬರು ಸಿಕ್ಕಿರಬೇಕು, ಬಹುಶಃ ...

ಮರವಿಯ ಮಂಜು ಕರಗಲೂಬಹುದು
ಮಿನುಗೇಳಬಹುದು ನಿನ್ನ ಕಣ್ಣು, ಬಹುಶಃ ...

ಜೀವಮಾನದಿಡೀ ಕೆನ್ನೀರ ಕಣ್ಣೀರು
ಬರಿಸುವುದೇನೋ ಸಖಿಯ ನೆನಪು, ಬಹುಶಃ ...

ಅಗಲಿರುವರೆಲ್ಲ ಎಲ್ಲಿ ಸೇರುವರು ಫರಾಜ್
ಆದರೂ ನೀ ನಿರೀಕ್ಷಿಸುತ್ತಿರು, ಬಹುಶಃ ...


http://www.youtube.com/watch?v=60YNlwIOWDA


Monday, 5 August 2013

ಚಿರ ನಿದ್ರೆ :

ಸಾವಿನ ನೋವು ಸತ್ತವನಿಗಿಲ್ಲ
ಇದ್ದವರಿಗಿರದ ಸುಖದ ನಿದ್ರೆ
ಸುಳಿಯ ತೂರಿ ನುಸುಳಿಕೊಂಡ
ಅಗಾಧ ಬೆಳಕಿನ ಅಕ್ಕರೆ !

ಪೀಕಲಾಟದ ಬಾಳ ಸೀಳಿ
ಅನುಭವ ಜನ್ಯ ಸರಪಳಿ
ಹಾರುತಿಹನು ಪುಣ್ಯವಂತ
ಹಿಂದೆ ಹಾಕಿ ಕಳಕಳಿ

ಮಮತೆಗಿರಲಿ ನಿಮ್ಮ ನಂಟು
ಐಕ್ಯದೆಡೆಗೆ ಬಿಟ್ಟ ಹೊರಟು
ಅದೆಷ್ಟು ಬಿಕ್ಕಿ ಅಳುವಿರೆಲ್ಲ
ಬಿಡಿಸಲಾರಿರಿ ಬದುಕಿನೊಗಟು

ನಂತರ ನೂರು ದಿನದ ಶೋಕ
ಸಹಜತೆಗೆ ಮರಳುವ ಲೋಕ
ಬರೀ ಸಾವಲ್ಲ ಅವನದು
ಇಹದ ಹಿಂಸೆಯಿಂದ ಮೋಕ! -VV